ಮೈಸೂರು;ವಾಣಿವಿಲಾಸ ಮಹಿಳಾ ಕಾಲೇಜು ಸನಿಹದಲ್ಲಿ ಯುವಕರ ಗುಂಪಿನ ನಡುವೆ ಗಲಾಟೆ ನಡೆದಿದ್ದು,ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ನಗರದ ನಜರ್ ಬಾದ್‌ನಲ್ಲಿರುವ ವಾಣಿ ವಿಲಾಸ ಮಹಿಳಾ ಕಾಲೇಜಿನಲ್ಲಿ ಇಂದು ಕಾರ್ಯಕ್ರಮವಿತ್ತು.ಇದು ಮಹಿಳಾ ಕಾಲೇಜು ಆದರೂ ಇಂದಿನ ಕಾರ್ಯಕ್ರಮಕ್ರಮಕ್ಕೆ ಹುಡುಗರಿಗೂ ಅವಕಾಶ ಕಲ್ಪಿಸಲಾಗಿತ್ತು.
ಕ್ಷುಲ್ಲಕ ವಿಚಾರಕ್ಕೆ ಕಾಲೇಜು ಬಳಿ ಯುವಕರ ಗುಂಪಿನ ನಡುವೆ ಗಲಾಟೆ ಆಗಿದೆ.ಹುಡುಗಿ ವಿಚಾರಕ್ಕೆ ಜಗಳ ನಡೆದಿದೆ ಎಂದು ಹೇಳಲಾಗಿದೆ.ಆದರೆ ನಿಖರ ಮಾಹಿತಿ ತಿಳಿದು ಬಂದಿಲ್ಲ.
ಕಾಲೇಜು ಬಳಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ನಡುವೆ ಪರಸ್ಪರ ಹೊಡೆದಾಟ ನಡೆದಿದೆ.ಮೈಸೂರು ನಗರ ಪೊಲೀಸ್ ಕಮೀಷನರ್ ಆಯುಕ್ತರ ಕಚೇರಿ ಸಮೀಪದಲ್ಲೇ ಈ ಘಟನೆ ನಡೆದಿದೆ.ವಿದ್ಯಾರ್ಥಿಗಳ ಗುಂಪು ಹೊಡೆದಾಡಿಕೊಂಡಿದ್ದಾರೆ. ಗಲಾಟೆ ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಪೊಲೀಸರು ಗುಂಪನ್ನು ಲಘು ಲಾಠೀ ಪ್ರಹಾರ ನಡೆಸಿ ಚದುರಿಸಿದ್ದಾರೆ.