ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ಪತಿ & ಮಗ; ಮನನೊಂದು‌ ಮಹಿಳೆ ಆತ್ಮಹತ್ಯೆ

ಮೈಸೂರು:ಕೊಲೆ ಪ್ರಕರಣದಲ್ಲಿ ಗಂಡ ಮತ್ತು ಮಗ ಜೈಲು ಪಾಲಾದ್ದರಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸುದ್ದಿ ತಿಳಿದು ಜೈಲಿನಲ್ಲಿದ್ದ ಪತಿ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ.

ಮೈಸೂರಿನ ವಿದ್ಯಾನಗರ ಬಡಾವಣೆಯ 4ನೇ ಕ್ರಾಸ್‌ನಲ್ಲಿ ಆಗಸ್ಟ್‌ 20ರಂದು ಬಾಲರಾಜ್ ಎಂಬ ಯುವಕನ ಕೊಲೆ ನಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿ ತೇಜಸ್ ಹಾಗೂ ಆತನ ತಂದೆ ಸಾಮ್ರಾಟ್‌ ಸೇರಿ ಸಂಜಯ್, ಕಿರಣ್ ಎಂಬುವವರ ವಿರುದ್ಧ ಬಾಲರಾಜ್‌ ಪೋಷಕರು ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಇದರಿಂದ ಆರೋಪಿ ತೇಜಸ್‌ ತಾಯಿ ಇಂದ್ರಾಣಿ ಆಘಾತಕ್ಕೆ ಒಳಗಾಗಿದ್ದರು. ಘಟನೆಯಿಂದ ಮನೆಯ ಮರ್ಯಾದೆ ಹೋಯ್ತೆಂದು ಬಂತು ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪತ್ನಿ ಸಾವಿನ ಸುದ್ದಿ ಕೇಳಿ ಜೈಲಿನಲ್ಲಿದ್ದ ತಂದೆ ಸಾಮ್ರಾಟ್‌ಗೆ ಹಠಾತ್‌ ಹೃದಯಾಘಾತವಾಗಿದ್ದು, ಅವರು ಕೂಡ ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು