ಮನೆಗೆ ಹೊತ್ತಿಕೊಂಡ ಬೆಂಕಿ, ಮಲಗಿದ್ದಲ್ಲೇ ನಾಲ್ವರು ಬಾಲಕಿಯರು ಸುಟ್ಟು ಕರಕಲು; ಹೃದಯವಿದ್ರಾಹಕ ಘಟನೆ ವರದಿ..
ಬಿಹಾರ;ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಮನೆಯಲ್ಲಿ ಮಲಗಿದ್ದ ನಾಲ್ವರು ಬಾಲಕಿಯರು ಸುಟ್ಟು ಕರಕಲಾಗಿ 6 ಮಂದಿ ಗಾಯಗೊಂಡಿರುವ ಹೃದಯವಿದ್ರಾಹಕ ಘಟನೆ ಮುಜಾಫರ್‌ಪುರ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮನೆಯಲ್ಲಿ ಮಲಗಿದ್ದ ನರೇಶ್ ರಾಮ್ ಅವರ ಪುತ್ರಿ ಸೋನಿ ಕುಮಾರಿ (15), ಅಮೃತಾ ಕುಮಾರಿ (12), ಕವಿತಾ ಕುಮಾರಿ (8) ಮತ್ತು ಶಿವಾನಿ ಕುಮಾರಿ (6) ಸುಟ್ಟು ಕರಕಲಾಗಿದ್ದಾರೆ.
ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಮದಯಾಳು ಠಾಣೆ ಬಳಿಯ ಗುಡಿಸಲಿನಂತಿರುವ ಮನೆಯಲ್ಲಿ ಬೆಳಗಿನ ಜಾವ ಅಗ್ನಿ ಅನಾಹುತ ಸಂಭವಿಸಿದೆ.ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಘಟನೆಯಲ್ಲಿ ಮನೆಯಲ್ಲಿ ಮಲಗಿದ್ದ ನಾಲ್ವರು ಬಾಲಕಿಯರು ಸುಟ್ಟು ಕರಕಲಾಗಿ ಆರು ಮಂದಿ ಗಾಯಗೊಂಡಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.ಅಗ್ನಿ ಅನಾಹುತಕ್ಕೆ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.