ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಸಹಪಾಠಿ ವಿಧ್ಯಾರ್ಥಿಗಳಿಗೆ ಸೂಚಿಸಿದ ಶಿಕ್ಷಕಿ; ಆಘಾತಕಾರಿ ಘಟನೆಯ ವಿಡಿಯೋ ವೈರಲ್..

ಉತ್ತರಪ್ರದೇಶ; ಮುಜಾಫರ್‌ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿ ತನ್ನ ತರಗತಿಯಲ್ಲಿದ್ದ ಮಕ್ಕಳಿಗೆ ಓರ್ವ ಮುಸ್ಲಿ ವಿದ್ಯಾರ್ಥಿಗೆ ಒಬ್ಬೊಬ್ಬರಾಗಿ ಹೊಡೆಯುವಂತೆ ಸೂಚಿಸಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.

ಮನ್ಸೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖುಬ್ಬಾಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಕಿ ತ್ರಿಪ್ತಾ ತ್ಯಾಗಿ ಮತ್ತು ಆಕೆಯ ಮಾಲೀಕತ್ವದ ನೇಹಾ ಪಬ್ಲಿಕ್ ಸ್ಕೂಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತ್ಯಾಗಿ ಆದೇಶಿಸಿದ ವೀಡಿಯೊದಲ್ಲಿ, ಮಕ್ಕಳು ಬಾಲಕ‌ನ ಬಳಿಗೆ ನಡೆದು ಕಣ್ಣೀರಿಡುತ್ತಿರುವ ಹುಡುಗನಿಗೆ ಕಪಾಳಮೋಕ್ಷ ಮಾಡುತ್ತಾರೆ.

ಒಂದು ಮಗು ಹುಡುಗನನ್ನು ಹೊಡೆದ ನಂತರ ಕುಳಿತುಕೊಳ್ಳುತ್ತಿದ್ದಂತೆ, ತ್ಯಾಗಿ ಅವನಿಗೆ ಹೇಳುತ್ತಾಳೆ “ಕ್ಯಾ ತುಮ್ ಮಾರ್ ರಹೇ ಹೋ? ಝೋರ್ ಸೆ ಮಾರೋ ನಾ (ಅವನಿಗೆ ಯಾಕೆ ಇಷ್ಟು ಲಘುವಾಗಿ ಹೊಡೆಯುತ್ತಿದ್ದೀಯ? ಅವನನ್ನು ಬಲವಾಗಿ ಹೊಡೆಯಿರಿ) ಎಂದು ಹೇಳಿದ್ದಾರೆ.

ಚಿಕ್ಕ ವಿದ್ಯಾರ್ಥಿಗಳು, ಅದರ ನಂತರ, ಅಳುತ್ತಿರುವ ತಮ್ಮ ಸಹಪಾಠಿಯನ್ನು ಹೊಡೆಯಲು ಒಬ್ಬೊಬ್ಬರಾಗಿ ಸರತಿಯಲ್ಲಿ ನಿಂತಿದ್ದಾರೆ. ಒಬ್ಬ ಹುಡುಗ ಮಗುವಿನ ತಲೆಯ ಮೇಲೆ ಹೊಡೆದರೆ, ಮತ್ತೊಬ್ಬ ಅವನ ಬೆನ್ನಿಗೆ ಹೊಡೆಯುತ್ತಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿಯ ತಂದೆ, ಘಟನೆಯ ಕುರಿತು ದೂರು ದಾಖಲಿಸುವುದಿಲ್ಲ ಎಂದು ಹೇಳಿದ್ದಾರೆ. ನಾವು ನಮ್ಮ ಮಗುವನ್ನು ಶಾಲೆಯಿಂದ ಬಿಡಿಸುವ ನಿರ್ಧಾರಕ್ಕೆ ಬಂದಿದ್ದು, ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಈಗಾಗಲೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ವೀಡಿಯೊವನ್ನು ಗಮನಿಸಿದ ಪೊಲೀಸರು, ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ ಮತ್ತು ಅವರು ದೂರು ಸ್ವೀಕರಿಸಿದ ನಂತರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಡಿಎಸ್ಪಿ (ಖತೌಲಿ) ರವಿಶಂಕರ್ ಮಿಶ್ರಾ ಈ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಈ ಮಾಹಿತಿ ಬಂದಿದೆ ಮತ್ತು ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಮನ್ಸೂರ್‌ಪುರ ಪೊಲೀಸ್ ವ್ಯಾಪ್ತಿಯ ಖುಬ್ಬಾಪುರದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ