ಮುಜಾಫರ್ ನಗರ: ಶಾಲಾ ವಿದ್ಯಾರ್ಥಿಯೋರ್ವನಿಗೆ ಹೊಡೆಯುವಂತೆ ಸಹಪಾಠ ವಿದ್ಯಾರ್ಥಿಗಳಿಗೆ ಶಿಕ್ಷಕಿ ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು.ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಶಿಕ್ಷಕಿ ತ್ರಿಪ್ತ ತ್ಯಾಗಿ ವಿರುದ್ಧ ಕೇಸ್ ದಾಖಲಾಗಿತ್ತು.
ಇದೀಗ ಭಾರೀ ವಿವಾದದ ಬಳಿಕ ಶಿಕ್ಷಕಿ ತನ್ನ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.ಆಕೆ ದೈಹಿಕವಾಗಿ ವಿಕಲಚೇತನಳಾಗಿರುವುದರಿಂದ ನನಗೆ ಎದ್ದೇಳಲು ಕಷ್ಟವಾಗುತ್ತಿದೆ ಎಂದು ಮಕ್ಕಳಲ್ಲಿ ಹಲ್ಲೆ ನಡೆಸುವಂತೆ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಮುಜಾಫರ್ನಗರದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.ತ್ರಿಪ್ತಾ ತ್ಯಾಗಿ ತಮ್ಮ ಹೇಳಿಕೆಯಲ್ಲಿ ವಿಡಿಯೋ ನಕಲಿಯಾಗಿದ್ದು,ತನ್ನ ಮಾನಹಾನಿ ಮಾಡಲು ವೈರಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಶಿಕ್ಷಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಭಾರತೀಯ ಜನತಾ ಪಕ್ಷವೂ (ಬಿಜೆಪಿ) ಟೀಕೆಗಳನ್ನು ಎದುರಿಸುತ್ತಿದೆ.
ಎಎನ್ಐ ಜೊತೆ ಮಾತನಾಡಿದ ಶಿಕ್ಷಕಿ, “ವೈರಲ್ ಮಾಡಿದ ವೀಡಿಯೊವನ್ನು ಎಡಿಟ್ ಮಾಡಿ ಕಟ್ ಮಾಡಲಾಗಿದೆ, ನನಗೆ ಅಂತಹ ಉದ್ದೇಶ ಇರಲಿಲ್ಲ. ನಮ್ಮ ಸ್ಥಳದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಇರುತ್ತಾರೆ ಮತ್ತು ನಮ್ಮ ಶಾಲೆಯಲ್ಲಿ ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಮಗುವಿನ ಪೋಷಕರು ಅವನೊಂದಿಗೆ ಸ್ಟ್ರಿಕ್ಟ್ ಆಗಿ ವರ್ತಿಸಬೇಕು ಎಂದು ಹೇಳಿದ್ದರು.ಅವನು ಕಳೆದ 2 ತಿಂಗಳಿಂದ ಹೋಂವರ್ಕ್ ಮಾಡಿರಲಿಲ್ಲ, ಆದ್ದರಿಂದ ನಾನು ಅವನಿಗೆ ಹೊಡುಯುವಂತೆ ಇತರ ಮಕ್ಕಳಿಗೆ ಹೇಳಿದೆ ಎಂದು ಹೇಳಿದ್ದಾರೆ.
ಇದು ಕ್ಷುಲಕ ವಿಚಾರ, ಆದರೆ ಇದನ್ನು ದೊಡ್ಡದಾಗಿ ಮಾಡಲಾಗಿದೆ. ಅವರು ನನ್ನ ಮಕ್ಕಳಿದ್ದಂತೆ. ಆದರೆ ವಿಚಾರವನ್ನು ದೊಡ್ಡದು ಮಾಡಲಾಗಿದೆ ಎಂದು ಹೇಳಿದ್ದಾರೆ.