ಕಾರ್ಕಳ;ರಾಜ್ಯ ವಿಧಾನ ಸಭಾ ಚುನಾವಣೆ ಫಲಿತಾಂಶ ಹೊರಬಿದ್ದು ಕಾಂಗ್ರೆಸ್ 135 ಸ್ಥಾನ ಪಡೆಯುವ ಮೂಲಕ ಸರಕಾರ ರಚನೆಗೆ ಮುಂದಾಗಿದೆ.
ಬಿಜೆಪಿಯ ಲೆಕ್ಕಾಚಾರಗಳೆಲ್ಲವೂ ಈ ಬಾರಿ ತಲೆಕೆಳಗಾಗಿದ್ದು ಹಲವು ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶ ಪ್ರಕಟವಾಗಿದೆ.ಕಾರ್ಕಳ ವಿಧಾನ ಸಭಾ ಕ್ಷೇತ್ರದ ಫಲಿತಾಂಶ ಈ ಬಾರಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಆಪ್ತ ಎಂದು ಹೇಳಲಾಗುತ್ತಿದ್ದ ಉದಯ್ ಶೆಟ್ಟಿ ಅವರನ್ನು ಕಣಕ್ಕೆ ಇಳಿಸಲಾಗಿತ್ತು.ಬಿಜೆಪಿಯಿಂದ ಸಚಿವರಾಗಿದ್ದ ಸುನಿಲ್ ಕುಮಾರ್ ಸ್ಪರ್ಧೆಗೆ ಇಳಿದಿದ್ದರು. ಆದರೆ ಸುನಿಲ್ ಕುಮಾರ್ ಅವರ ರಾಜಕೀಯ ಗುರು ಎಂದು ಹೇಳಲಾಗುತ್ತಿದ್ದ, ಶಿವ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಕೂಡ ಈ ಬಾರಿ ಚುನಾವಣೆಯಲ್ಲಿ ಶಿಷ್ಯನ ಮುಂದೆ ನಿಂತುಕೊಂಡಿದ್ದರು.
ಇದು ಈ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.
ಸುನಿಲ್ ಕುಮಾರ್ ವಿರುದ್ಧ ಮುತಾಲಿಕ್ ಹಲವು ಆರೋಪ ಮಾಡಿದ್ದರು.ಹಿಂದೂ ಫೈರ್ ಬ್ರಾಂಡ್ ಎನ್ನಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ಹಿಂದುತ್ವ ಎಂದು ಓಡಾಡುತ್ತಿದ್ದರು.ಹಿಂದೂ ಕಾರ್ಯಕರ್ತರ ಪರ ಮಾತಮಾಡುತ್ತಿದ್ದರು.ಇದರಿಂದಾಗಿ ಸುನಿಲ್ ಕುಮಾರ್ ಮತ್ತು ಗುರು ಮುತಾಲಿಕ್ ನಡುವೆ ಜಿದ್ದಾಜಿದ್ದಿ ನಡೆಯಲಿದೆ ಎನ್ನಲಾಗಿತ್ತು.
ಆದರೆ ಫಲಿತಾಂಶವು ಹಲವು ಕುತೂಹಲಕ್ಕೆ ತೆರೆಬಿದ್ದಿದ್ದು, ಕಾರ್ಕಳದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿಯ ಸುನಿಲ್ ಕುಮಾರ್ & ಕಾಂಗ್ರೆಸ್ ನ ಉದಯ್ ಶೆಟ್ಟಿ ನಡುವೆ ಎನ್ನುವುದು ಬಯಲಾಗಿದೆ.ಮೂತಲಿಕ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಕಾರ್ಕಳದ ಜನ ಮುತಾಲಿಕ್ ಗೆ ತಿರಸ್ಕರಿಸಿದ್ದಾರೆ.
ಕಾರ್ಕಳದಲ್ಲಿ ಸುನಿಲ್ ಕುಮಾರ್ ಕಾಂಗ್ರೆಸ್ ನ ಉದಯ್ ವಿರುದ್ಧ 5,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸುನಿಲ್ ಅವರು 77,028 ಮತಗಳನ್ನು ಪಡೆದರೆ, ಉದಯ ಕುಮಾರ್ ಶೆಟ್ಟಿ ಅವರು 72,426 ಮತಗಳನ್ನು ಗಳಿಸಿದರು.ಇನ್ನು ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಅವರು 4508 ಮತಗಳನ್ನಷ್ಟೇ ಪಡೆದುಕೊಂಡಿದ್ದಾರೆ.
ಇನ್ನು ಕಾರ್ಕಳದಲ್ಲಿ ಜೆಡಿಎಸ್ನಿಂದ ಶ್ರೀಕಾಂತ್ ಕೊಚ್ಚೂರು ಸ್ಪರ್ಧಿಸಿದ್ದು ಸೋತಿದ್ದಾರೆ.ಎಎಪಿಯಿಂದ ಡೇನಿಯಲ್ ಕೂಡ ಕಡಿಮೆ ಮತಗಳನ್ನು ಪಡೆದು ಸೋತಿದ್ದಾರೆ.ಒಟ್ಟಾರೆಯಾಗಿ ಇಲ್ಲಿ ಮತದಾರ ಮತ್ತೆ ಸುನಿಲ್ ಕುಮಾರ್ ಅವರ ಕೈ ಹಿಡಿದು ವಿಧಾನಸಭೆಗೆ ಕಳುಹಿಸಿದ್ದಾರೆ.