ಕಾರ್ಕಳ;ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದು ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ನಿಲ್ಲಿಸದೇ ಸಹಕಾರ ನೀಡಬೇಕು. ತಪ್ಪಿದಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ವಿರುದ್ಧವೂ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಹೇಳಿದ್ದಾರೆ.
ಕಾರ್ಕಳದಲ್ಲಿ ಶಿಷ್ಯನ ವಿರುದ್ಧವೆ ಸಿಡಿದೆದ್ದು ಮುತಾಲಿಕ್ ಸ್ಪರ್ಧೆಗೆ ಇಳಿದಿದ್ದಾರೆ. ಸುನಿಲ್ ಗೆ ಸೋಲಿಸಿ ಎಂದು ಕರೆ ನೀಡಿದ್ದಾರೆ.ಇದರಿಂದ ಸುನಿಲ್ ಅವರಿಗೆ ಸಿಗುವ ಹಿಂದುತ್ವದ ಮತ ವಿಭಜನೆ ಆಗುವ ಸಾಧ್ಯತೆ ಇದೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸುನಿಲ್ ಕುಮಾರ್,ನಮ್ಮ ಪಕ್ಷದ ನಿಲುವನ್ನು ಬೇರೆಯವರು ಹೇಳುವ ಅಗತ್ಯ ಇಲ್ಲ.ಈ ರೀತಿಯ ಸ್ಪರ್ಧೆಗಳಿರಬೇಕು. ಅಂತಿಮವಾಗಿ ಮತದಾರರೇ ಎಲ್ಲವನ್ನೂ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.