ತಂದೆಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ 7ರ ಬಾಲಕ

ತೆಲಂಗಾಣ;7 ವರ್ಷದ ಬಾಲಕನೋರ್ವ ತಂದೆಯ ದೌರ್ಜನ್ಯದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸುದ್ದಿಯಾಗಿದ್ದಾನೆ.

ತೆಲಂಗಾಣ ಮುಸ್ತಾಬಾದ್ ನಿವಾಸಿ ಬಾಲಕೃಷ್ಣ ಎಂಬಾತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ.ಕುಡಿತದ ಅಮಲಿನಲ್ಲಿ ತನ್ನ ಪತ್ನಿಯ ಮೇಲೆ ದಿನನಿತ್ಯ ಹಲ್ಲೆ ಮಾಡುತ್ತಿದ್ದು,ಇದನ್ನು ನೋಡಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ಏಳು ವರ್ಷದ ಬಾಲಕ ಭರತ್ ರೋಸಿ ಹೋಗಿದ್ದ.

ತಾಯಿಯ‌ ಮೇಲೆಯಲ್ಲದೆ ತನಗೂ ಹಾಗು ತನ್ನ ಸಹೋದರಿ ಗೂ ತಂದೆ ಹೊಡೆಯುತ್ತಿದ್ದ ಇದರಿಂದ ನೊಂದು ಕೊಂಡು‌ಬಾಲಕ ನೇರ ಪೊಲೀಸ್ ಠಾಣೆಗೆ ತೆರಳಿ‌‌ ದೂರು ನೀಡಿದ್ದಾನೆ.

ಬಾಲಕ ಎಲ್ಲಾ ವಿಷಯವನ್ನು ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ವರಲುಗೆ ಮನವರಿಕೆ ಮಾಡಿ‌ಕೊಟ್ಟಿದ್ದಾನೆ.

ಬಾಲಕನ ಕಥೆಯನ್ನೆಲ್ಲಾ ತಾಳ್ಮೆಯಿಂದ ಕೇಳಿಸಿಕೊಂಡು ಆತನ ತಂದೆ ಬಾಲಕೃಷ್ಣನನ್ನು ಠಾಣೆಗೆ ಕರೆಸಿಕೊಂಡಿದ್ದಾರೆ.ಇನ್ನೊಮ್ಮೆ ಈ ರೀತಿ ಮಾಡಿದರೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು