ಮುಸ್ಲಿಮರ ವಿವಾಹ ನೋಂದಣಿಗೆ ವಕ್ಫ್ ಮಂಡಳಿಗೆ ಅನುಮತಿ ನೀಡಿದ ರಾಜ್ಯ ಸರಕಾರ; ವಿವಾಹ ಸರ್ಟಿಫಿಕೇಟ್ ಪಡೆಯಲು ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ…

ಮಂಗಳೂರು;ಮುಸ್ಲಿಮ್ ಜೋಡಿಯ ವಿವಾಹ ನೋಂದಣಿ ಮಾಡಲು ರಾಜ್ಯ ವಕ್ಫ್ ಮಂಡಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್,ವಿವಾಹ ಸರ್ಟಿಫಿಕೇಟ್ ನೋಂದಣಿ ಮಾಡಲು ರಾಜ್ಯ ಸರ್ಕಾರ 2023 ಫೆಬ್ರವರಿ 21ರಂದು ವಕ್ಫ್ ಮಂಡಳಿಗೆ ಅನುಮತಿ ನೀಡಿದೆ.ಜಿಲ್ಲೆಯ ಮುಸ್ಲಿಮರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಾರ್ವಜನಿಕರು ಮದುವೆ ನೋಂದಣಿ ಮಾಡಿಕೊಳ್ಳಲು ಇಚ್ಛಿಸಿದರೆ ಅದರ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ವಕ್ಫ್ ಅಧಿಕಾರಿಗೆ ಸಲ್ಲಿಸಬೇಕು.ದಾಖಲೆಗಳನ್ನು ಪರಿಶೀಲಿಸಿ ಅವರು 15 ದಿನಗಳೊಳಗೆ ಮದುವೆ ಪ್ರಮಾಣ ಪತ್ರವನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಮದುವೆ ಪ್ರಮಾಣ ಪತ್ರಕ್ಕೆ ವಧು ಅಥವಾ ವರ ಅರ್ಜಿ ಸಲ್ಲಿಸಬೇಕು.ಜಂಟಿ ವಿವಾಹ ದೃಢೀಕರಣ ಪತ್ರ ಸಲ್ಲಿಸಬೇಕು. ಪತ್ರಕ್ಕೆ ನೋಟರಿಯಿಂದ ದೃಢೀಕರಣ ಮಾಡಿಸಬೇಕು.

ಮಸೀದಿಯಿಂದ ನೀಡುವ ನಿಖಾನಾಮ ಮೂಲ ಪ್ರತಿ ಜೆರಾಕ್ಸ್ ಪ್ರತಿ ಪಡೆದು ಅದನ್ನು ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಯವರಿಂದ ಮಾತ್ರ ದೃಢೀಕರಣ ಮಾಡಿಕೊಡಬೇಕು.

ನಿಖಾನಾಮದಲ್ಲಿರುವಂತೆ ವಿವಾಹ ದೃಢೀಕರಣ ಪತ್ರದಲ್ಲಿ ವರ ಮತ್ತು ವಧುವಿನ ಹೆಸರು ದಾಖಲಿಸಲಾಗುವುದು.ಆದ್ದರಿಂದ ಆಧಾರ್ ಮತ್ತು ಪಾರ್ಸ್ ಪೋರ್ಟ್ ನಲ್ಲಿ ಇರುವಂತೆ ಹೆಸರುಗಳನ್ನು ದಾಖಲಿಸಬೇಕು. ಯಾವುದೇ ಕಾರಣಕ್ಕೂ ಹೆಸರುಗಳನ್ನು ಬದಲಾಯಿಸಲಾಗುವುದಿಲ್ಲ.

ಹೆಸರುಗಳನ್ನು ತಿದ್ದುಪಡಿ ಮಾಡಿದ್ದಲ್ಲಿ ಅಂತಹ ಅರ್ಜಿದಾರರು ಮಸೀದಿಯ ಮೂಲ ನಿಖಾನಾಮ ರಿಜಿಸ್ಟರ್ ವಕ್ಫ್ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು ಎಂದು ನಾಸೀರ್ ಲಕ್ಕಿಸ್ಟಾರ್ ಅವರು‌ ಮಾಹಿತಿ ನೀಡಿದ್ದಾರೆ.

ವಿವಾಹ ಸರ್ಟಿಫಿಕೇಟ್ ಬೇಕಾದವರು ಈ ಮೇಲೆ ತಿಳಿಸಿದ ದಾಖಲೆಗಳ ಸಹಿತ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ‌.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರ್ ಪತ್ನಿಗೆ ನಾನು ಕೆಲಸ ಕೊಡುತ್ತೇನೆ, ನಳಿನ್ ಕುಮಾರ್ ರಾಜೀನಾಮೆ ಕೊಡಲಿ- ಪ್ರತಿಭಾ ಕುಳಾಯಿ ಏನೆಲ್ಲಾ ಹೇಳಿದ್ರು?

ಮಂಗಳೂರು:ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ವಾಗ್ದಾಳಿ ನಡೆಸಿದ್ದಾರೆ.

Developed by eAppsi.com