ಬಾಲಕನಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುಸ್ಲಿಂ ಲೀಗ್ ನ ಹಿರಿಯ ಮುಖಂಡನ ಬಂಧನ

ಕಾಸರಗೋಡು;14 ವರ್ಷದ ಅಪ್ರಾಪ್ತ ಬಾಲಕನನ್ನು ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ ಮುಸ್ಲಿಂ ಲೀಗ್‌ನ ಪ್ರಮುಖ ನಾಯಕ ಎಂ ಮುಹಮ್ಮದ್ ಕುಂಞ ಅವರನ್ನು ಅತ್ತೂರು ಪೊಲೀಸರು ಬಂಧಿಸಿದ್ದಾರೆ.

ಮುಳಿಯಾರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಕುಂಞ ಅವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಲಾಗಿದೆ. ಹೇಯ ಕೃತ್ಯವನ್ನು ಎಸಗುವ ಮೊದಲು ಸಂತ್ರಸ್ತ ಬಾಲಕನಿಗೆ ಡ್ರಗ್ಸ್ ನೀಡಿದ ಆರೋಪವಿದೆ.

ಮುಹಮ್ಮದ್ ಕುಂಞಯ ಬಂಧನಕ್ಕೆ ಕಾರಣವಾದ ಘಟನೆಯು ಏಪ್ರಿಲ್ 11 ರ ರಾತ್ರಿ ಸಂತ್ರಸ್ತರ ನಿವಾಸದ ಬಳಿಯ ಕಟ್ಟಡದಲ್ಲಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಮಹಮ್ಮದ್‌ನ ಸ್ನೇಹಿತ ಥೈಸೀರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಬಾಲಕನ ಪೋಷಕರು ಆತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಗಂಭೀರ ಆರೋಪಗಳ ಪರಿಣಾಮವಾಗಿ, ಮುಹಮ್ಮದ್ ಕುಂಞ ಅವರನ್ನು ಮುಸ್ಲಿಂ ಲೀಗ್‌ನ ಎಲ್ಲಾ ಅಧಿಕೃತ ಸ್ಥಾನಗಳಿಂದ ತೆಗೆದುಹಾಕಲಾಗಿದೆ. ಅವರ ಮೇಲಿನ ದೂರಿನ ನಂತರ ಪಕ್ಷವು ಕ್ಷಿಪ್ರ ಕ್ರಮ ಕೈಗೊಂಡಿದೆ.

ಟಾಪ್ ನ್ಯೂಸ್