ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಕೇಸ್ ದಾಖಲು

ಚಿತ್ರದುರ್ಗ;ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂಕಷ್ಠದಲ್ಲಿರುವ ಮುರುಘಾ ಶ್ರೀಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಂತ್ರಸ್ತ ಬಾಲಕಿಯಲ್ಲಿ ಒಬ್ಬಳು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು,ಈ ಹಿನ್ನಲೆಯಲ್ಲಿ ಶ್ರೀಗಳ ವಿರುದ್ದ ಕೇಸ್ ದಾಖಲಾಗಿದೆ ಎನ್ನಲಾಗಿದೆ.

ಪ್ರಕರಣದ ವಿಚಾರಣೆ ವೇಳೆಯಲ್ಲಿ ಬಾಲಕಿಯ ಹೇಳಿಕೆ ಮೇರೆಗೆ ಶ್ರೀಗಳ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಈಗಾಗಲೇ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿಯನ್ನು ಸೋಮವಾರ ಶ್ರೀಗಳ ಪರ ವಕೀಲರು ಚಿತ್ರದುರ್ಗ ಕೋರ್ಟ್‌ ಗೆ ಅರ್ಜಿ ಸಲ್ಲಿಕೆ ಮಾಡಿದ್ದು,ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಸೆಪ್ಟಂಬರ್‌ 1ರಂದು ನಡೆಸುವುದಾಗಿ ತಿಳಿಸಿದೆ.

ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರು ಸೇರಿದಂತೆ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಅವರು ಮಹರಾಷ್ಟ್ರ ತೆರಳುತ್ತಿದ್ದಂತೆ ಅವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಬಳಿಕ ಮಠಕ್ಕೆ ವಾಪಸ್ಸು ಶ್ರೀಗಳು ಬಂದಿದ್ದಾರೆ ಎನ್ನಲಾಗಿದೆ.ಇನ್ನು ಮುರುಘಾ ಶರಣರನ್ನು ಬಂಧಿಸುವಂತೆ ಹಲವೆಡೆ ಪ್ರತಿಭಟನೆಗಳು ಕೂಡ ನಡೆಯುತ್ತಿದೆ.

ಟಾಪ್ ನ್ಯೂಸ್