BIG NEWS ಮುರುಘಾ ಶರಣರ ವಿರುದ್ಧ ಫೋಕ್ಸೋ ಕೇಸ್ ಬೆನ್ನಲ್ಲೇ ಮತ್ತೊಂದು ಸ್ಪೋಟಕ‌ ಬೆಳವಣಿಗೆ, ಮಾಜಿ ಶಾಸಕನ ವಿರುದ್ಧವೂ ಲೈಂಗಿಕ‌ ದೌರ್ಜನ್ಯ ಕೇಸ್

ಮುರುಘಾ ಶರಣರ ವಿರುದ್ಧ ಫೋಕ್ಸೋ ಕೇಸ್ ಬೆನ್ನಲ್ಲೇ ಮತ್ತೊಂದು ಸ್ಪೋಟಕ‌ ಬೆಳವಣಿಗೆ

ಚಿತ್ರದುರ್ಗ;ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿರುವ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ.

ಮಠದ ಹಾಸ್ಟೆಲ್‌ ಲೇಡಿ ವಾರ್ಡನ್‌ ರಶ್ಮೀ ಚಿತ್ರದುರ್ಗ ಪೊಲೀಸ್‌ ಠಾಣೆಯಲ್ಲಿ ಮಾಜಿ‌ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ.

ಹಲವು ವರ್ಷಗಳಿಂದ ಸ್ವಾಮೀಜಿ ಹಾಗೂ ಬಸವರಾಜನ್‌ ನಡುವೆ ಜಟಾಪಟಿ ನಡೆಯುತ್ತಿತ್ತು.ಈ ಹಿನ್ನೆಲೆಯಲ್ಲಿ ಬಸವರಾಜನ್‌ ಅವರನ್ನು 2007ರಲ್ಲಿ ಆಡಳಿತಾಧಿಕಾರಿ ಹುದ್ದೆಯಿಂದ ತೆಗೆಯಲಾಗಿತ್ತು.ಆದರೆ ಅವರು ಕಳೆದ ಮಾ.7ರಂದು ಮಠದ ಆಡಳಿತಾಧಿಕಾರಿಯಾಗಿ ಆಗಮಿಸಿದ್ದಾರೆ.ಅವರು ಹಾಸ್ಟೆಲ್‌ನಲ್ಲಿ ಯಾರೂ ಇಲ್ಲದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ಬಸವರಾಜನ್‌ ವಿರುದ್ಧ ಲೇಡಿ ವಾರ್ಡನ್‌ ದೂರು ದಾಖಲಿಸಿದ್ದಾರೆ.

ಸ್ವಾಮೀಜಿ ವಿರುದ್ಧ ದೂರು ನೀಡಿರುವ ಇಬ್ಬರು ವಿದ್ಯಾರ್ಥಿನಿಯರನ್ನು ಬಸವರಾಜನ್‌ ಅವರೇ ಮಠಕ್ಕೆ ಕರೆತಂದಿದ್ದರು.ಅವರೇ ಷಡ್ಯಂತ್ರ ಮಾಡಿ ಸ್ವಾಮೀಜಿ ವಿರುದ್ಧ ದೂರು ಕೊಡಿಸಿದ್ದಾರೆ ಎಂಬ ಆರೋಪ ಕೂಡಾ ಮಾಡಲಾಗಿದೆ.

ಮುರುಘಾ ಶರಣರು,ಮಠದ ಇನ್ನಿಬ್ಬರು,ಮಹಿಳಾ ವಾರ್ಡನ್ ಸೇರಿ ಐವರ ವಿರುದ್ಧ ನಿನ್ನೆ ರಾತ್ರಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿತ್ತು.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು