ಮುರ್ಡೇಶ್ವರ ಬೀಚ್ ನಲ್ಲಿ ಇಬ್ಬರು ಯುವಕರು ಸಮುದ್ರಪಾಲು

ಶಿವಮೊಗ್ಗ;ಮುರ್ಡೇಶ್ವರ ಬೀಚ್ ನಲ್ಲಿ ಸಮುದ್ರಪಾಲಾಗಿದ್ದ ಸಾಗರ ತಾಲೂಕಿನ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ.

ಸಾಗರ ತಾಲೂಕಿನ ಪುನೀತ್(30) ಹಾಗೂ ರಾಘವೇಂದ್ರ(17) ಮೃತಪಟ್ಟವರು.ಪುನೀತ್ ಮೃತದೇಹವು ಮಂಗಳವಾರ ಪತ್ತೆಯಾಗಿದ್ದರೆ, ರಾಘವೇಂದ್ರ ಮೃತದೇಹ ಇಂದು ಪತ್ತೆಯಾಗಿದೆ.

ಸೋಮವಾರ ಸಂಜೆ ಮೂವರು ಗೆಳೆಯರು ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದರು.ಈ ವೇಳೆ ಸಮುದ್ರಕ್ಕೆ ಈಜಲು ಇಳಿದ ಇಬ್ಬರು ನೀರುಪಾಲಾಗಿದ್ದರು.

ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್