ಪುತ್ತೂರು; ಯುವತಿಯನ್ನು ಚೂರಿಯಿಂದ ಇರಿದು‌ ಕೊಲೆ ಮಾಡಿದ ಆರೋಪಿಯ ಬಂಧನ; ಈತ ಕೃತ್ಯ ನಡೆಸಿದ್ದೇಕೆ‌ ಗೊತ್ತಾ?

ಪುತ್ತೂರು:ಮುಂಡೂರು ಕಂಪದಲ್ಲಿ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಯಶ್ರಿ(23)ನ್ನು ಕನಕಮಜಲು ನಿವಾಸಿ ಉಮೇಶ್ ನಿನ್ನೆ ಮನೆಗೆ ನುಗ್ಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ.

ಉಮೇಶ್, ಜಯಶ್ರಿಯ ಸಂಂಧಿಕನಾಗಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಆತನ ನಡವಳಿಕೆಯಿಂದ ಬೇಸತ್ತು ಜಯಶ್ರೀ ಇತ್ತೀಚೆಗೆ
ಆತನಿಂದ ದೂರ ಸರಿದಿದ್ದಳು, ಇದೇ ಸಿಟ್ಟಿನಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಟಾಪ್ ನ್ಯೂಸ್