-ಅಫ್ರೀದ್ ಮತ್ತು ಮುನವೀರ್ ಮೃತರು ಎಂದು ಗುರುತಿಸಲಾಗಿದೆ.
ಕಣ್ಣೂರು:ಇನ್ನೋವಾ ಕಾರು- ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ವಯನಾಡಿನಲ್ಲಿ ನಡೆದಿದೆ.
ಮೃತರನ್ನು ಕಣ್ಣೂರು ಮೂಲದ ಅಫ್ರೀದ್ ಮತ್ತು ಮುನವೀರ್ ಎಂದು ಗುರುತಿಸಲಾಗಿದೆ. ಮಾನಂತವಾಡಿ-ಕಲ್ಪೆಟ್ಟಾ ಮಾರ್ಗದಲ್ಲಿ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಮೂವರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾರು ಚಾಲಕ ನಿದ್ರೆಗೆ ಜಾರಿದ ನಂತರ ನಿಯಂತ್ರಣ ಕಳೆದುಕೊಂಡಿದೆ. ಪಚಿಲಕ್ಕಾಡು ಟೌನ್‌ನಲ್ಲಿ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಗಾಯಗೊಂಡಿರುವ ಮೂರನೇ ಪ್ರಯಾಣಿಕ ಮುನವೀರ್ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಕಾಸರಗೋಡು;ಯುವತಿಯ ಬರ್ಬರ ಕೊಲೆ
ಕಾಸರಗೋಡು:ಯುವತಿಯೋರ್ವಳನ್ನು ಕೊಲೆಗೈದು ಪ್ರಿಯಕರ ಪೊಲೀಸರಿಗೆ ಶರಣಾದ ಘಟನೆ ಕಾಞ೦ಗಾಡ್ ನಲ್ಲಿ ನಡೆದಿದೆ.
ಬ್ಯೂಟಿಶಿಯನ್ ಆಗಿದ್ದ ಉದುಮ ಮಾಂಗಾಡ್ ನ ದೇವಿಕಾ(34) ಕೊಲೆಯಾದ ಯುವತಿ. ಕೊಲೆಯ ಬಳಿಕ ಈಕೆಯ ಪ್ರಿಯಕರ ಹೊಸದುರ್ಗ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಬೋವಿಕ್ಕಾನ ದ ಸತೀಶ್ ಭಾಸ್ಕರ್(36) ಠಾಣೆಗೆ ಶರಣಾದ ಆರೋಪಿ.ಈತ ಕಾಞ೦ಗಾಡ್ ನ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಇಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು.ಆದರೆ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇಬ್ಬರ ಕೌಟುಂಬದವರ ನಡುವೆ ಸಮಸ್ಯೆ ಉಂಟಾಗಿದ್ದು, ದೇವಿಕಾ ವಿರುದ್ಧ ಸತೀಶ್ ಭಾಸ್ಕರ್ ನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಮೇಲ್ಪರಂಬ ಠಾಣಾ ಪೊಲೀಸರು ಎರಡು ಕುಟುಂಬದವರನ್ನು ಕರೆದು ಮಾತುಕತೆ ನಡೆಸಿದ್ದರು.
ಸತೀಶ್ ಕಳೆದ ಒಂದು ವಾರದಿಂದ ವಸತಿಗ್ರಹದಲ್ಲಿ ವಾಸವಾಗಿದ್ದ, ನಿನ್ನೆ ಮಧ್ಯಾಹ್ನ ದೇವಿಕಾಳನ್ನು ವಸತಿಗೃಹಕ್ಕೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.