ದುಬೈನಲ್ಲಿ ದುಬಾರಿ ವಿಲ್ಲಾವನ್ನು ಖರೀದಿಸಿದ ಮುಕೇಶ್ ಅಂಬಾನಿ, ಇದರ ಮೌಲ್ಯ ಎಷ್ಟು ಗೊತ್ತಾ?

ದುಬೈ:ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ದುಬೈನಲ್ಲಿ ದುಬಾರಿ ವಿಲ್ಲಾವನ್ನು ಖರೀದಿಸಿದ್ದಾರೆ.

ಸುಮಾರು 80 ಮಿಲಿಯನ್ ಡಾಲರ್ (639 ಕೋಟಿ ರೂ.) ಬೆಲೆಯ ದುಬಾರಿ ವಿಲ್ಲಾವನ್ನು ಪಾಮ್ ಜುಮೇರಾದಲ್ಲಿರುವ ಬೀಚ್ ಬಳಿ ಖರೀದಿಸಿದ್ದಾರೆ.

ಈ ವಿಲ್ಲಾವನ್ನು ಮುಕೇಶ್ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್​ಗಾಗಿ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

ಈ ಕಡಲ ತೀರದ ಬಂಗಲೆಯು ಪಾಮ್-ಆಕಾರದ ಕೃತಕ ದ್ವೀಪಸಮೂಹದ ಉತ್ತರ ಭಾಗದಲ್ಲಿದೆ.ಇದರಲ್ಲಿ‌ 10 ಮಲಗುವ ಕೊಠಡಿಗಳು,ಖಾಸಗಿ ಸ್ಪಾ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಸ್ವಿಮ್ಮಿಂಗ್ ಪೂಲ್​ಗಳು ಸೇರಿ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ.

ಟಾಪ್ ನ್ಯೂಸ್