BREAKING ಸಾಮಾಜಿಕ ಕಾರ್ಯಕರ್ತೆ ಮುಜತ್ ಸುಲ್ತಾನ ಬರ್ಬರ ಕೊಲೆ; ಬೆಚ್ಚಿಬಿದ್ದ ಜನ

ಕಲಬುರ್ಗಿ; ಸಾಮಾಜಿಕ ಕಾರ್ಯಕರ್ತೆ ಮುಜತ್ ಸುಲ್ತಾನ ಅವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಕಲಬುರ್ಗಿ ನಗರದ ಹಾಗರಗಾ ರಸ್ತೆಯಲ್ಲಿ ಜಂಜಂ ಕಾಲೋನಿ ನಿವಾಸಿ ಮುಜತ್ ಸುಲ್ತಾನ(35) ಅವರನ್ನು ಕೊಲೆ ಮಾಡಲಾಗಿದೆ.

ಮೊದಲು ಮುಜತ್ ಸ್ಕೂಟಿಗೆ ಕಾರ್​ನಿಂದ ಅಪಘಾತ ಮಾಡಲಾಗಿದೆ.ನಂತರ ಸುಲ್ತಾನ್ ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ.

ಘಟನೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜೀಮ್ ಶೇಖ್, ವಸೀಂ ಶೇಖ್, ನಯಿಮ್, ನದೀಮ್ ಎಂಬುವವರು ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.

ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆಗೆ ಕಾರಣ ಮತ್ತು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರ್ ಪತ್ನಿಗೆ ನಾನು ಕೆಲಸ ಕೊಡುತ್ತೇನೆ, ನಳಿನ್ ಕುಮಾರ್ ರಾಜೀನಾಮೆ ಕೊಡಲಿ- ಪ್ರತಿಭಾ ಕುಳಾಯಿ ಏನೆಲ್ಲಾ ಹೇಳಿದ್ರು?

ಮಂಗಳೂರು:ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ವಾಗ್ದಾಳಿ ನಡೆಸಿದ್ದಾರೆ.

Developed by eAppsi.com