ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ

ರಾಯಚೂರು;ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ಮೇಗಳ‌ಪೇಟೆಯಲ್ಲಿ ನಡೆದಿದೆ.

ಮೇಗಳಪೇಟೆ ಹೊರ ವಲಯದ ಕೃಷಿ ಜಮೀನಿನ ಬಾವಿಯಲ್ಲಿ ಚೌಡಮ್ಮ(34),ರಾಮಣ್ಣ(4),ಮುತ್ತಣ್ಣ(3)ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಮುದಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಮಕ್ಕಳನ್ನು ಮೊದಲು ಬಾವಿಗೆ ಎಸೆದು ಬಳಿಕ ತಾಯಿ ಬಾವಿಗೆ ಹಾರಿದ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಟಾಪ್ ನ್ಯೂಸ್