ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ, ರೇವಣ್ಣ, ಎ.ಮಂಜುಗೆ ಅನರ್ಹತೆಯ ಭೀತಿ

ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾತನಾಡಿದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಪ್ರಜ್ವಲ್ ಜೊತೆ ರೇವಣ್ಣ, ಎ ಮಂಜು ಕೂಡ ಅನರ್ಹರಾಗುತ್ತಾರೆ ಎಂದು ಹೇಳಿದ್ದಾರೆ.

ಯಾವುದೇ ಚುನಾವಣೆಗೆ ಸ್ಪರ್ಧಿಸುವಾಗ ಆಸ್ತಿ, ಬ್ಯಾಂಕ್ ವಿವರಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಆದರೆ ಪ್ರಜ್ವಲ್ ರೇವಣ್ಣ ಸರಿಯಾಗಿ ಮಾಹಿತಿ ನೀಡದ ಕಾರಣ ಅವರನ್ನು ಹೈಕೋರ್ಟ್ ಅನರ್ಹ ಮಾಡಿದೆ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಅಕ್ರಮ ಕೆಲಸಕ್ಕೆ ಹೆಚ್ಡಿ ರೇವಣ್ಣ ಸಹಕಾರ ನೀಡಿದ್ದಾರೆ. ಆದ್ದರಿಂದ ಹೆಚ್ಡಿ ರೇವಣ್ಣ ಅವರು ತಪ್ಪಿತಸ್ಥರು. ಅವರನ್ನು ಅನರ್ಹಗೊಳಿಸಬೇಕೆಂದು ಎಂದು ನಾವು ಮನವಿ ಮಾಡಿದ್ದೇವೆ.ಕೋರ್ಟ್ ಅವರಿಗೂ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದ್ದಾರೆ.

ಅದೇ ರೀತಿ ಮಂಜು ಸಹ ಅಕ್ರಮ ಮಾಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಕೋರ್ಟ್ ಗಮನಕ್ಕೆ ತಂದಿದ್ದರು.ಹೀಗಾಗಿ ಎ ಮಂಜು ಅವರಿಗೂ ನಿಮ್ಮನ್ನು ಯಾಕೆ ಅನರ್ಹ ಮಾಡಬಾರದು ಎಂದು ಕೋರಿ ಕೋರ್ಟ್ ನೋಟಿಸ್ ಜಾರಿ ಮಾಡಿದೆ ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ.

ಟಾಪ್ ನ್ಯೂಸ್