ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಕಾಫಿ ತಯಾರಿಸುವುದು ಪ್ರಾಣಿಯೊಂದರ ಮಲದಿಂದ!;ಅಚ್ಚರಿಯಾದರೂ ಇದು ವಾಸ್ತವ! ಈ ಕಾಫಿ ಬೆಲೆ ಎಷ್ಟಿದ ಗೊತ್ತಾ?

ಜಗತ್ತಿನ ಅತಿ ಬೆಲೆಯ ಕಾಫಿಯನ್ನು ಪ್ರಾಣಿಯೊಂದರ ಮಲದಿಂದ ತಯಾರಿಸುತ್ತಾರೆ ಎಂದರೆ ನೀವು ನಂಬಲೇ ಬೇಕು.ಕಬರ್ ಬಿಜ್ಜು ಬೆಕ್ಕಿನ ಮಲವಿಸರ್ಜನೆಯು ಪ್ರಪಂಚದ ಅತ್ಯಂತ ದುಬಾರಿ ಕಾಫಿಗಳ ಮೂಲವಾಗಿದೆ.

ಕಬರ್ ಬಿಜ್ಜು ಬೆಕ್ಕಿನಂತೆ ಕಾಣುತ್ತದೆ. ಕಬರ್ ಬಿಜ್ಜುವಿನಿಂದ ಹೊರತೆಗೆಯಲಾದ ಕಾಫಿಯನ್ನು ಕಾಪಿ ಲುವಾಕ್ ಎಂದು ಕರೆಯಲಾಗುತ್ತದೆ. ಇದು ತುಂಬಾ ದುಬಾರಿಯಾಗಿದೆ.

ಏಷ್ಯನ್ ಪಾಮ್ ಸಿವೆಟ್ ಅಥವಾ ಸ್ಥಳೀಯವಾಗಿ ಕರೆಯುವ ಈ ಕಬರ್ ಬಿಜ್ಜು ಸೇವಿಸಿದ ಮತ್ತು ಜೀರ್ಣವಾಗದ ಮತ್ತು ಅಂತಿಮವಾಗಿ ದೇಹದಿಂದ ವಿಸರ್ಜಿತ ಕಾಫಿ ಬೀಜಗಳು ಪ್ರಪಂಚದ ಅತ್ಯಂತ ದುಬಾರಿ ಕಾಫಿಗಳ ಮೂಲವಾಗಿದೆ.

ಈ ಕಾಫಿಯ ಒಂದು ಕಪ್ ಅಮೇರಿಕಾದಲ್ಲಿ ಸುಮಾರು 6000 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯ ಕಟ್ಘೋರಾ ಪ್ರದೇಶದ ಸುತಾರ್ರಾ ಗ್ರಾಮದಲ್ಲಿ ಇಂತದ್ದೇ ಪ್ರಾಣಿ ಕಂಡು ಬಂದಿದ್ದು, ಜನರು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com