ಮಸೀದಿಯನ್ನು ಉದ್ಘಾಟನೆ ಮಾಡಿದ ಸ್ವಾಮೀಜಿ

ಕೊಪ್ಪಳ:ಭಾವೈಕ್ಯತೆ ಸಂಕೇತವಾಗಿರುವ ಗವಿಮಠ ಸ್ವಾಮೀಜಿ ಅವರು ಕುಕನೂರು ತಾಲೂಕಿನ ಬಾನಾಪುರದಲ್ಲಿ ಮಸೀದಿ ಉದ್ಘಾಟನೆ ಮಾಡಿದ್ದಾರೆ.

ಬಾನಾಪುರ ಗ್ರಾಮದಲ್ಲಿ ಕೇವಲ ಐದು ಮುಸ್ಲಿಂ ಕುಟುಂಬಗಳಿದ್ದು, ಎಲ್ಲಾ ಧರ್ಮದವರು ಸೇರಿ ಮಸೀದಿ‌ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಮಸೀದಿಯನ್ನು ಸ್ವಾಮೀಜಿಗಳು ಉದ್ಘಾಟನೆ ಮಾಡಿದ್ದಾರೆ.

ಬಾನಾಪುರದಲ್ಲಿ ಮಸೀದಿ ಉದ್ಘಾಟನೆ ಬಳಿಕ ಮಾತನಾಡಿದ ಸ್ವಾಮೀಜಿಗಳು, ಸೂರ್ಯನ ಬೆಳಕಿಗೆ ಗಾಳಿಗೆ ಇಲ್ಲದ ಧರ್ಮ ಮನುಷ್ಯನಿಗೆ ಯಾಕೆ? ಸೌಹಾರ್ದಯುತವಾಗಿ ಬಾಳುವುದು ಧರ್ಮ. ಹಣ್ಣು ತಿಂದು ಸಿಪ್ಪೆ ಎಸೆಯುವುದು ಧರ್ಮವಲ್ಲ. ಎಸೆದಿರುವ ಸಿಪ್ಪೆ ಸ್ವಚ್ಛಗೊಳಿಸುವುದು ಧರ್ಮ. ಇನ್ನೊಬ್ಬರ ಮನಸ್ಸಿಗೆ ನೋವು ಮಾಡದೆ ಇರೋದು ಧರ್ಮ ಎಂದು ಹೇಳಿದ್ದಾರೆ.

ಈ ಊರಿನಲ್ಲಿ ಕೇವಲ ಐದು ಮುಸ್ಲಿಂ ಕುಟುಂಬಗಳಿದ್ದು ಇವರಿಗಾಗಿ ಎಲ್ಲಾ ಧರ್ಮದವರು ಸೇರಿ ಮಸೀದಿ‌ ನಿರ್ಮಾಣ ಮಾಡಿರುವುದು ವಿಶೇಷ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ