ಮೂಡುಬಿದಿರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ಆರೋಪಿಗಳ ಬಂಧನ

ಮೂಡುಬಿದಿರೆ:ಸಹಪಾಠಿ ವಿದ್ಯಾರ್ಥಿನಿ ಜತೆ ಮಾತನಾಡಿದ ವಿದ್ಯಾರ್ಥಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಮೂಡುಬಿದಿರೆಯ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಬಳಿ ನಡೆದಿದೆ.

ಸೋಮವಾರ ರಾತ್ರಿ ಮೂಡಬಿದಿರೆಯ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಬಳಿ ಬೆಂಗಳೂರಿಗೆ ಹೋಗಲು ಬಸ್ ಗಾಗಿ ವಿದ್ಯಾರ್ಥಿನಿ ಕಾಯುತ್ತಿದ್ದಳು.ಈ ವೇಳೆ ಆಕೆಯ ಸಹಪಾಠಿ ವಿದ್ಯಾರ್ಥಿ ಆಕೆಯ ಜೊತೆ ಮಾತನಾಡಿಸಿದ್ದ.ಇಬ್ಬರೂ ಸ್ವಲ್ಪ ಸಮಯ ಮಾತನಾಡಿದ್ದರು.ಬಳಿಕ ಬಸ್ ಬಂದ ಕಾರಣ ವಿದ್ಯಾರ್ಥಿನಿ ತೆರಳಿದ್ದಳು.ಬಳಿಕ ವಿದ್ಯಾರ್ಥಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮೂಡುಬಿದಿರೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ವಿಜಯ್,ಅಭಿಲಾಷ್ ಹಾಗೂ ಸಂಜಯ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ