ಮೂಡಬಿದ್ರೆ; ಬೈಕ್ ಗೆ ಬಸ್ ಢಿಕ್ಕಿ, ಕಾಲೇಜು ವಿದ್ಯಾರ್ಥಿ ದುರ್ಮರಣ

ಮೂಡುಬಿದಿರೆ:ಖಾಸಗಿ ಬಸ್‌ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ
ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರಿನ ಹಂಡೇಲು ಎಂಬಲ್ಲಿ ನಡೆದಿದೆ.

ಆಳ್ವಾಸ್ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ(19) ಮೃತಪಟ್ಟಿದ್ದಾರೆ.ಇವರು ಎಡಪದವು ರಾಜೇಶ್ವರೀ ಜ್ಯುವೆಲರ್ಸ್ ನ ಚಂದ್ರಹಾಸ ಆಚಾರ್ಯ ಅವರ
ಪುತ್ರನಾಗಿದ್ದಾರೆ.

ಕಾರ್ತಿಕ್ ಕಾಲೇಜಿನಿಂದ ಮನೆಗೆ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಂಗಳೂರಿನಿಂದ ಮೂಡುಬಿದಿರೆಗೆ ಬರುತ್ತಿದ್ದ ಖಾಸಗಿ ಬಸ್ ಮತ್ತೊಂದು ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ತೀರ ಬಲಭಾಗಕ್ಕೆ ಚಲಿಸಿ ಬೈಕ್‌ಗೆ ಢಿಕ್ಕಿ ಹೊಡೆದಿದೆ

ಘಟನೆಯಲ್ಲಿ ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿದ್ದು,
ಸಹಸವಾರ ಅದೇ ಕಾಲೇಜಿನ ವಿದ್ಯಾರ್ಥಿ ಹರ್ಷಗೆ ಗಾಯಗಳಾಗಿದೆ.

ಈ ಕುರಿತು ಮೂಡುಬಿದಿರೆ ಪೊಲೀಸರು ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಟಾಪ್ ನ್ಯೂಸ್