ಮಂಗಳೂರು;ಪಿಎಫ್ ಐ ನಿಷೇಧದ ವೇಳೆ ಬಂಧಿತ ಪಿಎಫ್ ಐ ಕಾರ್ಯಕರ್ತ ಮೊಯ್ದೀನ್ ಹಳೆಯಂಗಡಿ ಅವರ ಪತ್ನಿ ನಿಧನರಾಗಿದ್ದು, ಮೊಯ್ದೀನ್ ಅವರು ಪೆರೋಲ್ ಮೇಲೆ ಆಗಮಿಸಿ ಪತ್ನಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಅನಾರೋಗ್ಯದಿಂದ ಮೊಯ್ದೀನ್ ಅವರ ಪತ್ನಿ ಸೌಧ ಅವರು ನಿಧನರಾಗಿದ್ದರು.ಇದರಿಂದಾಗಿ ಅವರು ಪೆರೋಲ್ ಮೇಲೆ ಆಗಮಿಸಿ ಪತ್ನಿಯ ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿದ್ದಾರೆ.ಈ ವೇಳೆ ಪೊಲೀಸ್ ಭದ್ರತೆಯಲ್ಲಿ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿದೆ.
ಮೊಯ್ದೀನ್ ಅವರ ಬಂಧನದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪಿಎಫ್ಐ ನಿಷೇಧದ ವೇಳೆ ಬಂಧನವಾಗಿರುವ ಇವರು ಅಮಾಯಕರು ಅವರನ್ನು ಕಠಿಣ ಕಾಯ್ದೆಯಡಿ ಸರಕಾರ ಬಂಧಿಸಿ ಜೈಲಿಗೆ ಹಾಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಕೇಳಿ ಬಂದಿದೆ.
ಮೊಯ್ದೀನ್ ಸೌದ ದಂಪತಿಗೆ ಪುಟ್ಟ ಪುಟ್ಟ ಮಕ್ಕಳಿದ್ದು, ತಾಯಿ ನಿಧನವಾಗಿದ್ದು ತಂದೆ ಜೈಲಿನಲ್ಲಿರುವ ಕಾರಣ ಮಕ್ಕಳು ಅನಾಥವಾಗಿದ್ದಾರೆ, ಇದು ಅನ್ಯಾಯ, ಅವರಿಗೆ ಸಾಂತ್ವನ ಹೇಳುವುದು ಯಾರು ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.