ಚಿಕ್ಕಮಗಳೂರು:ಮೂಡಿಗೆರೆ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಸಕಲೇಶಪುರ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಮನೆಯಿಂದ ಠಾಣೆಗೆ ಕರೆದೊಯ್ದು ಚಿತ್ರ ಹಿಂಸೆ ನೀಡಿ ಹಲ್ಲೆ ಮಾಡಿದ್ದಾರೆ ಎಂದು ಅವಿನಾಶ್ ಆರೋಪ ಮಾಡಿದ್ದಾರೆ.
ಪ್ರಚೋದನಾತ್ಮಕ ಹೇಳಿಕೆ ಕೊಟ್ಟು ತಲೆಮರೆಸಿಕೊಂಡಿರುವ ಬಜರಂಗದಳದ ಮಾಜಿ ಸಂಚಾಲಕ ರಘು ಸಕಲೇಶಪುರನೊಂದಿಗೆ ಸಂಪರ್ಕ ಹಿನ್ನೆಲೆ ಅವಿನಾಶ್ನನ್ನು ವಿಚಾರಣೆಗಾಗಿ ಸಕಲೇಶಪುರ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು.
ಈ ವೇಳೆ ಪೊಲೀಸರು ಕಾಲು, ಕಿವಿ, ಮುಖದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವಿನಾಶ್ ಆರೋಪಿಸಿದ್ದಾರೆ.ಆದರೆ ಈ ಬಗ್ಗೆ ಸತ್ಯಾಸತ್ಯತೆ ಇನ್ನು ತಿಳಿದು ಬರಬೇಕಿದೆ.
ಹಲ್ಲೆ ಆರೋಪಿಸಿ ಅವಿನಾಶ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.