ಧಾರವಾಡ:ಪ್ರಧಾನಿ ಮೋದಿ ಧಾರವಾಡ ಭೇಟಿ ವೇಳೆ
ಆರ್.ಎಸ್. ಎಸ್ ಕಾರ್ಯಕರ್ತನಿಗೆ ತಲೆ ಭಾಗಿ ಕಾಲಿಗೆ ನಮಸ್ಕರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಧಾರವಾಡ ಐಐಟಿ ಉದ್ಘಾಟನಾ ವೇದಿಕೆಗೆ ತೆರಳಲು ಧಾರವಾಡ ಬಂದಿದ್ದರು.
ಹುಬ್ಬಳ್ಳಿ ಮೂಲದ ವಿಶ್ವ ಹಿಂದೂ ಪರಿಷತ್ನ ಸಹ ಕಾರ್ಯದರ್ಶಿ ಆಗಿರುವ ಚೇತನ್ ರಾವ್ ಪಿಎಂ ಮೋದಿ ಅವರ ಕಾಲಿಗೆ ನಮಸ್ಕರಿಸಲು ಬಂದಿದ್ದಾಗ ಮರಳಿ ಅವರಿಗೆ ತಲೆ ಬಾಗಿ ಪ್ರತಿ ನಮಸ್ಕಾರ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.