ಮಂಗಳೂರು; ಮೋದಿ ಆಗಮನದ ಹಿನ್ನೆಲೆ ಮಂಗಳೂರಿನಲ್ಲಿ ಪೊಲೀಸರಿಂದ ತಪಾಸಣೆ ತೀವ್ರ, ಎರಡು ದಿನ ಸುತ್ತಮುತ್ತಲಿನ ಪ್ರದೇಶದ ಅಂಗಡಿಗಳು ಬಂದ್?

ಮಂಗಳೂರು;ಸೆ.2ಕ್ಕೆ ಪ್ರಧಾನಿ ಮೋದಿ ಆಗಮನದ ಹಿನ್ನೆಲೆ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು,ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ.

ಬಾನುವಾರದಿಂದಲೇ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.ಇದೀಗ ವಾಹನಗಳ ತಪಾಸಣೆ ತೀವ್ರಗೊಳಿಸಿದ್ದಾರೆ.ಸಮದ್ರ ತೀರದಲ್ಲೂ ಗಸ್ತು ಆರಂಭಿಸಲಾಗಿದ್ದು,ಕರಾವಳಿ ಕಾವಲು ಪಡೆ ಕಣ್ಗಾವಲಿಟ್ಟಿದೆ.

ಸಮಾವೇಶ ನಡೆಯುವ ಗೋಲ್ಡ್ ಫಿಂಚ್ ಮೈದಾನದ ಸಮೀಪ ಮೂರು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ.ಸೆ.2ರ ಸಂಜೆ ಪ್ರಧಾನಿ ಕೊಚ್ಚಿನ್‌ನಿಂದ ವಿಶೇಷ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.ಬಳಿಕ ಅಲ್ಲಿಂದ 3 ಹೆಲಿಕಾಪ್ಟರ್ ಮೂಲಕ ಸಮಾವೇಶದ ಸ್ಥಳಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನಿಯ ಭದ್ರತೆಯ ಮೇಲುಸ್ತುವಾರಿ ವಹಿಸಿರುವ ಎಸ್‌ಪಿಜಿ ತಂಡವು ಸಮಾವೇಶ ನಡೆಯುವ ಸ್ಥಳದ 200 ಮೀ.ದೂರದಲ್ಲಿ ಸೇಫ್ ರೂಂ ನಿರ್ಮಿಸಲು ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದ ಮೇರೆಗೆ ಕರಾವಳಿ ಕಾಲೇಜು,ಎ.ಜೆ. ಇಂಜಿನಿಯರಿಂಗ್ ಕಾಲೇಜು ಸಹಿತ ಪರಿಸರದ ಒಂದು ಕಟ್ಟಡವನ್ನು ಎಸ್‌ಪಿಜಿ ತಂಡವು ಸೇಫ್ ರೂಂ ಆಗಿ ಮಾಡಿದೆ.

ಗೋಲ್ಡ್‌ಫಿಂಚ್‌ನ ಸುಮಾರು 30 ಎಕರೆ ಮೈದಾನದ ಸುತ್ತಮುತ್ತ ಬಂದೋಬಸ್ತ್ ಏರ್ಪಡಿಸಲಾಗಿದೆ.ಸಮಾವೇಶ ನಡೆಯುವ ಸುತ್ತಮುತ್ತಲಿನ ಎಲ್ಲಾ ಅಂಗಡಿ,ಹೊಟೇಲ್, ಕಚೇರಿಗಳನ್ನು ಸೆ.1 ಮತ್ತು 2ರಂದು ಮುಚ್ಚಲು ಸೂಚನೆ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಟಾಪ್ ನ್ಯೂಸ್