ಮೋದಿಯ ಚಿನ್ನದ ಪ್ರತಿಮೆ ನಿರ್ಮಿಸಿದ ವ್ಯಕ್ತಿ!; ಎಲ್ಲಿ ಗೊತ್ತಾ?

ಗುಜರಾತ್‌;ಜ್ಯುವೆಲ್ಲರಿ ಅಂಗಡಿಯ ಮಾಲೀಕರೊಬ್ಬರು ಚಿನ್ನದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಸೂರತ್ ನಗರದ ರಾಧಿಕಾ ಚೈನ್ಸ್‌ ಮಾಲೀಕ ಬಸಂತ್‌ ಬೊಹ್ರಾ ಅವರು ಪ್ರತಿಮೆ ನಿರ್ಮಿಸಿದ್ದಾರೆ.

156 ಗ್ರಾಂ ತೂಕದ, 18 ಕ್ಯಾರೆಟ್‌ ಚಿನ್ನದಿಂದ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ.ಇದಕ್ಕೆ 10.5 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೋದಿ ಅಭಿಮಾನಿಯಾಗಿರುವ ಈತ, ತಮ್ಮ ಕಾರ್ಖಾನೆಯಲ್ಲಿ 20 ಮಂದಿ ಕುಶಲಕರ್ಮಿಗಳು ಸುಮಾರು ಮೂರು ತಿಂಗಳಲ್ಲಿ ಈ ಪ್ರತಿಮೆ ನಿರ್ಮಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್