ಪತ್ನಿ, ಮಕ್ಕಳ ಸಮ್ಮುಖದಲ್ಲೆ ಮೂರನೇ ಮದುವೆಯಾದ MLC

ವೈಎಸ್‌ಆರ್‌ಸಿಪಿ ಎಂಎಲ್‌ಸಿ ಜಯಮಂಗಲ ವೆಂಕಟರಮಣ ಮೂರನೇ ಬಾರಿಗೆ ವಿವಾಹವಾಗಿದ್ದಾರೆ. ಎರಡನೇ ಮದುವೆ, 3ನೇ ಮದುವೆ ಹೊಸ ವಿಷಯವಲ್ಲ, ಸುದ್ದಿಯೂ ಅಲ್ಲ. ಆದರೆ ಈ ಮದುವೆಯ ವಿಶೇಷವೆಂದರೆ ಅವರ ಈ 3ನೇ ಮದುವೆಗೆ 2ನೇ ಪತ್ನಿ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ.

ವೆಂಕಟರಮಟ ಕೈಕಲೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೆಕ್ಷನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಜಾತಾ ಎಂಬುವವರನ್ನ 2ನೇ ಪತ್ನಿ ಸಮ್ಮುಖದಲ್ಲೇ ವಿವಾಹವಾದರು.

ಎಂಎಲ್ ಸಿ ಜಯಮಂಗಲ ವೆಂಕಟರಮಣ ಅವರಿಗೆ ಇದು ಮೂರನೇ ವಿವಾಹ. ಈ ಮೂರನೇ ಮದುವೆಗೆ ಎರಡನೇ ಪತ್ನಿ ಸಾಕ್ಷಿ ಸಹಿ ಹಾಕಿರುವುದು. ಮತ್ತೊಂದು ವಿಶೇಷವೆಂದರೆ ಪತ್ನಿ ಮತ್ತು ಮಗನ ಸಮ್ಮುಖದಲ್ಲಿ ಮೂರನೇ ಮದುವೆ ನಡೆದಿದೆ. ವೆಂಕಟರಮಣ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅಷ್ಟೊತ್ತಿಗಾಗಲೇ ಆಕೆಗೆ ಮಗಳಿದ್ದಳು. ನಂತರ ವೆಂಕಟ ರಮಣ ಎರಡನೇ ಮದುವೆಯಾದರು. ಅವರ ಎರಡನೇ ಮದುವೆಯಿಂದ ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಈಗ ಮೂರನೇ ಮದುವೆಯಾಗಿದ್ದಾರೆ.

ಟಾಪ್ ನ್ಯೂಸ್