ಪಾಲಿಕೆ ಇಂಜಿನಿಯರ್ ಗೆ ಪಬ್ಲಿಕ್ ನಲ್ಲಿ ಕಪಾಳಮೋಕ್ಷ ಮಾಡಿದ ಶಾಸಕಿ;ವಿಡಿಯೋ ವೈರಲ್

ಪಾಲಿಕೆ ಇಂಜಿನಿಯರ್ ಗೆ ಪಬ್ಲಿಕ್ ನಲ್ಲಿ ಕಪಾಳಮೋಕ್ಷ ಮಾಡಿದ ಶಾಸಕಿ;ವಿಡಿಯೋ ವೈರಲ್

ಮಹಾರಾಷ್ಟ್ರ;ಇಂಜಿನಿಯರ್ ಓರ್ವನಿಗೆ ಶಾಸಕಿಯೊಬ್ಬರು ಸಾರ್ವಜನಿಕರ ಎದುರಲ್ಲೇ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

ಮುಂಬೈನ ಮೀರಾ ಭಯಂದರ್​ ವಿಧಾನಸಭೆ ಕ್ಷೇತ್ರದ ಪಕ್ಷೇತರ ಶಾಸಕಿ ಗೀತಾ ಜೈನ್​ ಮುನ್ಸಿಪಾಲ್​ ಕಾರ್ಪೋರೇಷನ್​ನ ಜೂನಿಯರ್​ ಇಂಜಿನಿಯರ್​ ಶುಭಂ ಪಾಟೀಲ್​ಗೆ ಕಪಾಳಮೋಕ್ಷ ಮಾಡಿದ್ದಾರೆ.ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಶಿಮೀರಾದ ಪೆಂಕಾರಪದ ಪ್ರದೇಶದಲ್ಲಿ ಜೂನಿಯರ್​ ಇಂಜಿನಿಯರ್​ ಶುಭಂ ಪಾಟೀಲ್​ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಶುಭಂ ನೇತೃತ್ವದ ಅಧಿಕಾರಿಗಳ ತಂಡ ಸುರಿಯುವ ಮೆಳೆಯಲ್ಲೇ ಆರು ತಿಂಗಳ ಮಗು ಮತ್ತು ಹಿರಿಯ ನಾಗರೀಕರನ್ನು ಮನೆಯಿಂದ ಹೊರದಬ್ಬಿದ್ದರು.

ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಶಾಸಕಿ ಗೀತಾ ಜೈನ್​ ಅಧಿಕಾರಿಗಳಾದ ಶುಭಂ ಹಾಗೂ ಸೋನಿ ಜೈನ್​ಗೆ ಮಳೆಗಾಲದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಬಾರದೆಂಬ ಸರ್ಕಾರಿ ನಿರ್ಣಯ ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡು ಕಪಾಳಮೋಕ್ಷ ಮಾಡಿದ್ದಾರೆ‌.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಸಕಿ ಗೀತಾ ಜೈನ್​ ಮಳೆಗಾಲದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸದಂತೆ ಸರ್ಕಾರದ ಕಡೆಯಿಂದ ನಿರ್ಣಯವನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ನಿಯಮ ಮೀರಿ ಇಂಜಿನಿಯರ್ ಅತಿಕ್ರಮಣ ತೆರವು ಮಾಡಲು ಮುಂದಾಗಿದ್ದರು.ಈ ವಿಚಾರ ತಿಳಿದು ನಾನು ಸ್ಥಳಕ್ಕೆ ತೆರಳಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಉತ್ತರ ಕೊಡದೆ ತಲೆ ತಗ್ಗಿಸಿಕೊಂಡು ನಗುತ್ತಿದ್ದರು. ಇದರಿಂದ ಅವರ ಮೇಲೆ ಕೈ ಮಾಡಿದ್ದೇನೆ ಅಷ್ಟೇ ಹೊರತು ಬೇರೆ ಯಾವ ಉದ್ದೇಶ ಇರಲಿಲ್ಲ ಎಂದು ಶಾಸಕಿ ಹೇಳಿದ್ದಾರೆ.

ಟಾಪ್ ನ್ಯೂಸ್