ಮೂಡಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್

ಮಂಗಳೂರು;ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಟಿವಿ ಚರ್ಚೆಯೊಂದರಲ್ಲಿ ಹೇಳಿದ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಖಾಸಗಿ ಟಿವಿ ವಾಹಿನಿಯೊಂದರ ಚುನಾವಣಾ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಿಥುನ್ ರೈ, ನಾವೆಲ್ಲರೂ ಹುಟ್ಟಿದ್ದು, ನಾವೆಲ್ಲರೂ ಇರುವುದು ಹಿಂದೂ ರಾಷ್ಟ್ರದಲ್ಲಿ, ಅದನ್ನು ಎದೆತಟ್ಟಿ ಹೇಳ್ತೇನೆ ನಾನು ಎಂದು ಹೇಳಿದ್ದಾರೆ.ಇದೀಗ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತ ಜಾತ್ಯತೀತ ರಾಷ್ಟ್ರವೆಂಬ ಸಾಮಾನ್ಯ ಜ್ಞಾನ ಗೊತ್ತಿಲ್ಲದಂತೆ ಮಿಥುನ್ ರೈ ಮಾತಾಡಿದ್ದಾರೆ ಎಂದು ಅಸಮಾಧಾನ ಕೇಳಿ ಬಂದಿದೆ.

ಮಿಥುನ್ ರೈ ಗೆ ಕಾಂಗ್ರೆಸ್ ಮತ್ತು ಭಾರತದ ಜಾತ್ಯಾತೀತತೆಯ ಅರಿವು ಇಲ್ಲ ಎಂದು ಜನರು ಮಾತನಾಡುತ್ತಿದ್ದಾರೆ‌.

ಟಾಪ್ ನ್ಯೂಸ್