ಬಶೀರ್, ಜಲೀಲ್, ನೌಶಿನ್ ಕುಟುಂಬಕ್ಕೆ ಪರಿಹಾರ ನೀಡಲು ಸಚಿವ ದಿನೇಶ್ ಗುಂಡೂರಾವ್ ಗೆ ಭೇಟಿ ಮಾಡಿದ ನಿಯೋಗ

ಮಂಗಳೂರು;ಕೋಮು ದ್ವೇಷಕ್ಕೆ ಬಲಿಯಾದ ಬಶೀರ್, ಪೊಲೀಸ್ ಗೋಲಿಬಾರ್‌ ನಲ್ಲಿ ಮೃತಪಟ್ಟ ನೌಶೀನ್ ಮತ್ತು ಜಲೀಲ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕೆ.ಅಶ್ರಫ್ ನೇತೃತ್ವದ ಮುಸ್ಲಿಮ್ ಒಕ್ಕೂಟ ನಿಯೋಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಮೃತರ ಕುಟುಂಬ ಸದಸ್ಯರೊಂದಿಗೆ ಸಚಿವರನ್ನು ಭೇಟಿ‌ ಮಾಡಿ ಕುಟುಂಬವು ಮನವಿಯನ್ನು ಸಲ್ಲಿಸಿದೆ.

ಸಂತ್ರಸ್ತ ಕುಟುಂಬವು ಪರಿಹಾರ ಪಡೆಯಲು ಅರ್ಹವಾಗಿದೆ ಎಂಬುದರ ಬಗ್ಗೆ ಕೆ.ಅಶ್ರಫ್ ರವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿವರಿಸಿದರು.

ಈ ವೇಳೆ ನಿಯೋಗದಲ್ಲಿ ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ, ಅಶ್ರಫ್ ಬದ್ರಿಯಾ, ಸಿ.ಎಮ್.ಮುಸ್ತಾಫಾ, ಷರೀಫ್, ಸಿರಾಜ್,ಹಕೀಮ್,ಶರೀಫ್ ಕೂಳೂರು, ನೌಫಲ್ ಮತ್ತು ಅರ್ಷದ್ ಕಂದಕ್ ಮತ್ತು ಸಂತ್ರಸ್ತ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಕಳೆದ ಸರಕಾರದ ಅವಧಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾಗಿ ಪರಿಹಾರ ಸಿಗದೆ ತಾರತಮ್ಯಕ್ಕೆ ಒಳಗಾಗಿದ್ದ 6 ಯುವಕರ ಕುಟುಂಬಕ್ಕೆ ಇತ್ತೀಚೆಗೆ ಸರಕಾರ 25 ಲಕ್ಷ ಪರಿಹಾರವನ್ನು ಕೊಟ್ಟಿತ್ತು.ಇನ್ನುಳಿದವರಿಗೆ ಕೂಡ ಪರಿಹಾರ ಕೊಡಬೇಕೆಂದು ಆಗ್ರಹ ಕೇಳಿ ಬಂದಿದೆ.

ಟಾಪ್ ನ್ಯೂಸ್