ನೂತನ ಸಚಿವರಿಗೆ ಖಾತೆ ಹಂಚಿಕೆ; ಗೃಹ ಸಚಿವರಾಗಿ ಪರಮೇಶ್ವರ್, ಡಿಕೆಶಿಗೆ ಜಲ; ಯಾರ್ಯಾರಿಗೆ ಯಾವ್ಯಾವ ಖಾತೆ ಸಿಕ್ಕಿದೆ? ಇಲ್ಲಿದೆ ಮಾಹಿತಿ..

ಬೆಂಗಳೂರು;ರಾಜ್ಯದ 24 ಮಂದಿ ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಸ್ಪೀಕರ್​ ಯು ಟಿ ಖಾದರ್​ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಮೊದಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ 10 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಇದರಿಂದಾಗಿ ಇದೀಗ ಒಟ್ಟು 34 ಮಂದಿ ಸರಕಾರದ ಭಾಗವಾಗಿದ್ದಾರೆ.

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.ಯಾರ್ಯಾರಿಗೆ ಯಾವ್ಯಾವ ಖಾತೆ? ಇಲ್ಲಿದೆ ಡಿಟೇಲ್ಸ್..

ಸಿದ್ದರಾಮಯ್ಯ -ಹಣಕಾಸು, DPAR ಮತ್ತು ಗುಪ್ತಚರ ಇಲಾಖೆ
ಡಿ.ಕೆ.ಶಿವಕುಮಾರ್ -ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ
ಡಾ.ಜಿ.ಪರಮೇಶ್ವರ್ -ಗೃಹ ಸಚಿವ
ಹೆಚ್.​ಕೆ.ಪಾಟೀಲ್ -ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ
ಕೆಚ್​.ಮುನಿಯಪ್ಪ -ಆಹಾರ ಮತ್ತು ನಾಗರಿಕ ಖಾತೆ
ಕೆ.ಜೆ.ಜಾರ್ಜ್​ -ಇಂಧನ ಖಾತೆ
ಎಂ.ಬಿ.ಪಾಟೀಲ್ -ಐಟಿ, ಬಿಟಿ
ರಾಮಲಿಂಗಾ ರೆಡ್ಡಿ -ಸಾರಿಗೆ
ಸತೀಶ್ ಜಾರಕಿಹೊಳಿ -ಲೋಕಪಯೋಗಿ
ಪ್ರಿಯಾಂಕ್ ಖರ್ಗೆ-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು‌ ನೀಡಲಾಗಿದೆ.

ಜಮೀರ್ ಅಹ್ಮದ್ ಖಾನ್-ವಸತಿ, ವಕ್ಫ್​​ ಅಂಡ್ ಅಲ್ಪಸಂಖ್ಯಾತ
ಕೃಷ್ಣ ಬೈರೇಗೌಡ -ಕಂದಾಯ
ದಿನೇಶ್ ಗಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಚಲುವರಾಯಸ್ವಾಮಿ -ಕೃಷಿ
ಕೆ.ವೆಂಕಟೇಶ್ -ಪಶುಸಂಗೋಪನೆ
ಹೆಚ್​.ಸಿ.ಮಹಾದೇವಪ್ಪ -ಸಮಾಜ ಕಲ್ಯಾಣ ಇಲಾಖೆ
ಈಶ್ವರ್ ಖಂಡ್ರೆ-ಅರಣ್ಯ ಮತ್ತು ಪರಿಸರ
ಕೆ.ಎನ್.ರಾಜಣ್ಣ-ಸಹಕಾರ
ಶರಣಪ್ಪ ಬಸಪ್ಪ ದರ್ಶಾನಾಪುರ್ -ಸಣ್ಣ ಕೈಗಾರಿಗೆ
ಶಿವನಾಂದ್ ಪಾಟೀಲ್ -ಜವಳಿ ಮತ್ತು ಸಕ್ಕರೆ ಖಾತೆ
ಆರ್​ಬಿ ತಿಮ್ಮಾಪುರ್ -ಅಬಕಾರಿ ಮತ್ತು ಮುಜರಾಯಿ
ಎಸ್​.ಎಸ್.ಮಲ್ಲಿಕಾರ್ಜುನ್ -ಗಣಿ ಮತ್ತು ಭೂವಿಜ್ಞಾನ
ಶಿವರಾಜ್ ತಂಡಗಡಿ -ಹಿಂದೂಳಿದ ವರ್ಗಗಳ ಕಲ್ಯಾಣ
ಶರಣ್ ಪ್ರಕಾಶ್ ಪಾಟೀಲ್ -ಉನ್ನತ ಶಿಕ್ಷಣ
ಮಂಕಾಳ್ ವೈದ್ಯ-ಮೀನುಗಾರಿಕೆ ಮತ್ತು ಬಂದರು
ಲಕ್ಷ್ಮೀ ಹೆಬ್ಬಾಳ್ಕರ್ -ಮಹಿಳೆ ಮತ್ತು ಮಕ್ಕಳ ಕಲ್ಯಾಣ
ರಹೀಂ ಖಾನ್ -ಪೌರಾಡಳಿತ
ಡಿ.ಸುಧಾಕರ್ -ಮೂಲಸೌಕರ್ಯ
ಸಂತೋಷ್ ಲಾಡ್- ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ
ಎನ್​.ಎಸ್​.ಬೊಸೆರಾಜು -ಪ್ರವಾಸೋದ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ
ಭೈರತಿ ಸುರೇಶ್- ನಗರಾಭಿವೃದ್ಧಿ
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಎಂ.ಸಿ.ಸುಧಾಕರ್-ವೈದ್ಯಕೀಯ
ಬಿ.ನಾಗೇಂದ್ರ -ಯುವಜನ ಸೇವೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯನ್ನು ನೀಡಲಾಗಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com