ಮತ್ತೋರ್ವ ಸಚಿವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್

ರಾಜಸ್ಥಾನ;ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲೇಹ್ ಮೊಹಮ್ಮದ್ ಅವರದ್ದು ಎನ್ನಲಾದ ಒಂದು ಅಶ್ಲೀಲ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಿಜೆಪಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದೆ.
ಸೋಷಿಯಲ್ ಮೀಡಿಯಾದಲ್ಲಿನ ವೈರಲ್ ಕ್ಲಿಪ್‌ನಲ್ಲಿ ಸಚಿವರು ಮತ್ತು ಒಳ ಉಡುಪಿನಲ್ಲಿರುವ ಮಹಿಳೆಯ ನಡುವಿನ ವೀಡಿಯೊ ಚಾಟ್ ರೀತಿ ಕಾಣಬಹುದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆಗೆ ಸಚಿವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ದಿ‌ ಫ್ರಿಂಟ್ ವರದಿ‌ ಮಾಡಿದೆ.

ರಾಜ್ಯದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಸಚಿವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
“ಅಶೋಕ್ ಗೆಹ್ಲೋಟ್ ಜೀ, ನಿಮ್ಮ ಸಚಿವರು ಮಹಿಳೆಯೊಂದಿಗೆ ಇರುವ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ನೀವು ವೋಟ್ ಬ್ಯಾಂಕ್‌ಗಾಗಿ ದುರಾಸೆಯಿಂದ ಸಚಿವ ಸಲೇಹ್ ಮೊಹಮ್ಮದ್ ಅವರನ್ನು ವಜಾಗೊಳಿಸುತ್ತೀರಾ ಅಥವಾ ಅವರನ್ನು ಬಿಡುತ್ತೀರಾ ಎಂದು ರಾಜಸ್ಥಾನ ಬಿಜೆಪಿ ವಿಡಿಯೋವೊಂದರ ಜೊತೆ ಟ್ವೀಟ್ ಮಾಡಿದೆ.

ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು, ಸಾಲೇಹ್ ಮೊಹಮ್ಮದ್ ಅವರು ಮಾಜಿ ಕ್ಯಾಬಿನೆಟ್ ಸಚಿವ ಗಾಜಿ ಫಕೀರ್ ಅವರ ಪುತ್ರರಾಗಿದ್ದಾರೆ, ಅವರು ನಿಧನರಾಗಿದ್ದಾರೆ.ಅವರಿಂದಲೇ ಸಾಲೇಹ್ ಅವರನ್ನು ಮಂತ್ರಿ ಮಾಡಲಾಯಿತು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ನಿಷ್ಠೆ ತೋರಿಸಿದ್ದಕ್ಕೆ ಮಿನಿಸ್ಟರ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇನ್ನು ವಿಡಿಯೋ ಅಸಲಿಯೋ ಅಥವಾ ನಕಲಿಯೋ? ವಿಡಿಯೋದಲ್ಲಿರುವುದ ಸಚಿವ ಸಾಲೇಹ್ ಅವರಾ ಎನ್ನುವುದು ತನಿಕೆಯಿಂದಲೇ ತಿಳಿದು ಬರಬೇಕಿದೆ.ಟಾಪ್ ನ್ಯೂಸ್

ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಕಾಫಿ ತಯಾರಿಸುವುದು ಪ್ರಾಣಿಯೊಂದರ ಮಲದಿಂದ!;ಅಚ್ಚರಿಯಾದರೂ ಇದು ವಾಸ್ತವ! ಈ ಕಾಫಿ ಬೆಲೆ ಎಷ್ಟಿದ ಗೊತ್ತಾ?

ಜಗತ್ತಿನ ಅತಿ ಬೆಲೆಯ ಕಾಫಿಯನ್ನು ಪ್ರಾಣಿಯೊಂದರ ಮಲದಿಂದ ತಯಾರಿಸುತ್ತಾರೆ ಎಂದರೆ ನೀವು ನಂಬಲೇ

ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಅನುಮಾನ ವ್ಯಕ್ತಪಡಿಸಿದ ಪೋಷಕರು

ರಾಯಚೂರು:ಕಾಲೇಜು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಕುಟುಂಬ

ಮುತಾಲಿಕ್ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ಸ್ಪರ್ಧಿಯನ್ನು ಹಾಕಿದ್ರೆ ಚಿಕ್ಕಮಗಳೂರಿನಲ್ಲಿ ಸಿಟಿ ರವಿಗೂ ಸಮಸ್ಯೆ?

ಕಾರ್ಕಳ;ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದು ಅವರ

Developed by eAppsi.com