ಸಾರ್ವಜನಿಕ ಸ್ಥಳದಲ್ಲೇ ಸಚಿವರಿಗೆ ಚೂರಿ ಇರಿತ; ಸಿಸಿಟಿವಿಯಲ್ಲೂ ದುಷ್ಕರ್ಮಿಯ ಕೃತ್ಯ ಸೆರೆ
ಮಾಲ್ಡೀವ್ಸ್;ಸಚಿವ ಅಲಿ ಸೊಲಿಹ್ ಅವರ ಮೇಲೆ ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಚೂರಿಯಿಂದ ಇರಿದ ಘಟನೆ ನಡೆದಿದೆ.
ಸೋಮವಾರ ಮಧ್ಯಾಹ್ನ ರಾಜಧಾನಿ ಮಾಲೆಯ ಉತ್ತರದಲ್ಲಿರುವ ಹುಲ್ಹುಮಲೆಯಲ್ಲಿ ಚಾಕು ಹಿಡಿದು ಬಂದ ವ್ಯಕ್ತಿ ಸ್ಕೂಟರ್ ನಲ್ಲಿದ್ದ ಸಚಿವ ಅಲಿ ಮೇಲೆ ಇರಿದಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.ಸಚಿವರು ಆಗಂತುಕನನ್ನು ತಳ್ಳಿ ಹಾಕಿ ಓಡುವುದು ವಿಡಿಯೋದಲ್ಲಿ ಸೆರೆಯಾಗಿದೆ.ಘಟನೆಯಲ್ಲಿ ಸಚಿವರ ಎಡಗೈಗೆ ಗಾಯವಾಗಿದೆ.
ಘಟನೆ ನಡೆದ ಕೂಡಲೇ ದಾಳಿಕೋರನನ್ನು ಬಂಧಿಸಲಾಗಿದೆ. ಸೊಲಿಹ್ ಅವರು ಪರಿಸರ,ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನದ ರಾಜ್ಯ ಸಚಿವರಾಗಿದ್ದಾರೆ.ಅವರು ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರ ಆಡಳಿತಾರೂಢ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಸಮ್ಮಿಶ್ರ ಪಾಲುದಾರರಾಗಿರುವ ಜುಮ್ಹೂರಿ ಪಕ್ಷದ (ಜೆಪಿ) ವಕ್ತಾರರೂ ಆಗಿದ್ದಾರೆ.