ತುಮಕೂರು; ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಕಣ್ಣಿಗೆ ಪಟಾಕಿಯ ಕಿಡಿ ಸಿಡಿದು ಗಾಯವಾಗಿರುವ ಘಟನೆ
ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ನಡೆದಿದೆ.
ಸಚಿವರು ಪಟ್ಟಣದ ಮಾರ್ಗವಾಗಿ ಹಾಸನಕ್ಕೆ ತೆರಳುವಾಗ ರಾಜಣ್ಣ ಅಭಿಮಾನಿಗಳು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಪಟಾಕಿ ಸಿಡಿಸಿ ಬರಮಾಡಿಕೊಂಡರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ರಾಜಣ್ಣ ಅವರು ಇಂದು ಬೆಳಿಗ್ಗೆ ಶಕ್ತಿ ಯೋಜನೆಯ ಉದ್ಘಾಟನೆಗೆ ಹಾಸನಕ್ಕೆ ತೆರಳುತ್ತಿದ್ದಾಗ ಕುಣಿಗಲ್‍ನಲ್ಲಿ ಅಭಿಮಾನಿಗಳು, ಹಿತೈಷಿಗಳು ರಾಜಣ್ಣ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಿ ಪಟಾಕಿ ಸಿಡಿಸಿದರು. ಈ ಸಮಯದಲ್ಲಿ ಸಿಡಿಮದ್ದಿನ ಕಿಡಿಯೊಂದು ಸಚಿವರ ಕಣ್ಣಿಗೆ ತಗುಲಿದೆ.
ಪಟಾಕಿಯ ಕಿಡಿ ನೇರವಾಗಿ ಬಲಗಣ್ಣಿಗೆ ಹಾರಿದ್ದು, ಕೂಡಲೆ ಸಚಿವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿಯಿತು. ಅದೃಷ್ಟವಶಾತ್ ಕಣ್ಣಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ಹಾಸನಕ್ಕೆ ತೆರಳಿದರು.
ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಇದೀಗ ಪರೀಕ್ಷೆ ಬಳಿಕ ಮತ್ತೆ ಸಚಿವರು ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎನ್ನಲಾಗಿದೆ.