ಉಪೇಂದ್ರ ಬಳಿಕ ರಾಜ್ಯದ ಪ್ರಭಾವಿ ಸಚಿವರ ಮೇಲೆ ಜಾತಿ ನಿಂದನೆ ಆರೋಪ; ಈ ಬಗ್ಗೆ ಸಚಿವರು ಹೇಳಿದ್ದೇನು ಗೊತ್ತಾ?

ದಾವಣಗೆರೆ:ದಲಿತ ಸಮುದಾಯಕ್ಕೆ ಉಪೇಂದ್ರ ಅವರು ಅವಮಾನವಾಗುವ ರೀತಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್‌ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆನ್ನಲಾದ ವೀಡಿಯೊ ಒಂದು ವೈರಲ್ ಆಗಿದೆ.

ಎಸ್.ಮಲ್ಲಿಕಾರ್ಜುನ್ ಅವರನ್ನು ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಸಂದರ್ಶನ ನಡೆಸಿದ್ದು,ಈ ಸಂದರ್ಶನದಲ್ಲಿ ಸಚಿವರು’ಊರನ್ನು ಹೊಲಗೇರಿ ಮಾಡಬೇಡಿʼ ಎಂಬ ಪದ ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.ಮೂರು ತಿಂಗಳ ಮೊದಲ ವಿಡಿಯೊ ಇದೀಗ ವೈರಲ್ ಆಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು ಗಾದೆ ಮಾತನ್ನು ನಾನು ಬಳಸಿಲ್ಲ, ಒಳ್ಳೆಯ ಕೆಲ್ಸಾ ಮಾಡಿ ಹೊಲಸು ಮಾಡಬೇಡಿ ಹೇಳಿದ್ದೇನೆ ಅಷ್ಟೇ.ಅದನ್ನು ನೀವು, ಅವರು ತಿರುಚಿದ್ದೀರಿ ಎಂದು ಅವರು ಹೇಳಿದ್ದಾರೆ.

ಉಪೇಂದ್ರ ಅವರು ಲೈವ್ ವಿಡಿಯೋದಲ್ಲಿ ಊರು ಇದ್ದರೆ ಹೊಲಗೇರಿ ಇರುತ್ತೆ ಎಂದು ಹೇಳಿದ್ದು, ವ್ಯಾಪಕ್ಕೆ ಆಕ್ರೋಶಕ್ಕೆ ಕಾರಣವಾಗಿತ್ತು.ಅವರ ಮೇಲೆ ಕೇಸ್ ಕೂಡ ದಾಖಲು ಮಾಡಲಾಗಿತ್ತು.ಎಫ್ ಐಆರ್ ಗೆ ಇದೀಗ ಹೈಕೋರ್ಟ್ ತಡೆ ನೀಡಿದೆ.

ಟಾಪ್ ನ್ಯೂಸ್