ಸಚಿವ ಅಶ್ವಥ್ ನಾರಾಯಣ್ ವಿರುದ್ದ ಸುಮೋಟೋ ಕೇಸ್ ದಾಖಲಿಸಲು ಸಿಎಂ ಇಬ್ರಾಹೀಂ ಆಗ್ರಹ

ಬೆಂಗಳೂರು:ಸಿದ್ದರಾಮಯ್ಯ ಬಗ್ಗೆ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ ಅವರ ಹೊಡೆದು ಹಾಕಬೇಕು ಎಂಬ ಹೇಳಿಕೆಗೆ ವ್ಯಾಪಕ‌ ಖಂಡನೆ ವ್ಯಕ್ತವಾಗುತ್ತಿದೆ.

ಸಿದ್ದರಾಮಯ್ಯನವರು ಬಗ್ಗೆ ಮಾಡಿರುವ ಕಾಮೆಂಟನ್ನು ಪಕ್ಷಾತೀತವಾಗಿ ಖಂಡಿಸಲಾಗುತ್ತಿದೆ.ಅಶ್ವಥ್ ನಾರಾಯಣ ನೀಡಿರುವ ಹೇಳಿಕೆ ಶಾಂತಿ ಕದಡುವ ಹೇಳಿಕೆಯಾಗಿರುವುದರಿಂದ ರಾಜ್ಯದ ಐಜಿ ಅವರು ಕೂಡಲೇ ಅವರ ವಿರುದ್ಧ ಸುಮೋಟು ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಹಾಕಬೇಕು ಎಂದು ಇಬ್ರಾಹಿಂ ಆಗ್ರಹಿಸಿದ್ದಾರೆ.

ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿಎಂ ಇಬ್ರಾಹೀಂ,ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಟಿಪ್ಪು ಸುಲ್ತಾನ್ ಗುಣಗಾನ ಮಾಡಿದ್ದಾರೆ, ಅವರನ್ನೂ ಈ ಬಿಜೆಪಿಯ ಹುಚ್ಚುಮುಂಡೇ ಗಿರಾಕಿ ಮುಗಿಸುತ್ತಾನಾ? ಎಂದು ಪ್ರಶ್ನೆ ಮಾಡಿದ್ದಾರೆ.

ಮಂಡ್ಯದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಸಚಿವ ಅಶ್ವತ್ಥ್ ನಾರಾಯಣ್ ಟಿಪ್ಪು ಸುಲ್ತಾನ್ ವಿಚಾರ ಮಾತನಾಡುತ್ತಾ, ಟಿಪ್ಪು ಹೊಡೆದಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದಾಕಬೇಕು ಎಂದಿದ್ದರು.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com