ಇಬ್ಬರು ಯುವಕರಿಗೆ ಸಚಿವರು ಮತ್ತು ಅವರ ಭದ್ರತಾ ಸಿಬ್ಬಂದಿ ಥಳಿಸುವ ವಿಡಿಯೋ ವೈರಲ್
ಉತ್ತರಾಖಂಡ;ಸಚಿವ ಪ್ರೇಮ್ ಚಂದ್ ಅಗರ್ವಾಲ್ ರಿಷಿಕೇಶದ ಜನನಿಬಿಡ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಕಪಾಳಮೋಕ್ಷ ಮಾಡಿ ಬಳಿಕ ವಾಗ್ವಾದಕ್ಕಿಳಿದಿರುವ ವೀಡಿಯೊ ವೈರಲ್ ಆಗಿದೆ.ಇದರ ಜೊತೆಗೆ ಅಗರ್ವಾಲ್ ಅವರ ಭದ್ರತಾ ಸಿಬ್ಬಂದಿ ಮತ್ತು ಬೆಂಬಲಿಗರು ಇಬ್ಬರನ್ನು ಘಳಿಸುವುದು ತೋರಿಸುತ್ತದೆ
ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವಾಗ ಸುರೇಂದ್ರ ಸಿಂಗ್ ನೇಗಿ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಅಗರ್ವಾಲ್ ಅವರ ಕಚೇರಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.ಆಗ ಆ ವ್ಯಕ್ತಿ ತನ್ನ ಕುರ್ತಾವನ್ನು ಹರಿದು ಹಾಕಿದನು.ಸಚಿವರ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ ಅವರ ಸಮವಸ್ತ್ರವೂ ಹರಿದಿತ್ತು. ಅವರ ಬಳಿ ಇದ್ದ ಅಧಿಕೃತ ಪಿಸ್ತೂಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಸಚಿವರನ್ನು ಗಾಯಗೊಳಿಸುವ ಉದ್ದೇಶದಿಂದ ವ್ಯಕ್ತಿ ಕಲ್ಲು ಎತ್ತಿಕೊಂಡಿದ್ದಾನೆ. ಸಚಿವರು ಮತ್ತು ಅವರ ಭದ್ರತಾ ಸಿಬ್ಬಂದಿ ತಮ್ಮನ್ನು ರಕ್ಷಿಸಿಕೊಂಡರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನೇಗಿ ಅವರು ಸಚಿವ ಅಗರ್ವಾಲ್ ಮತ್ತು ಅವರ ಸಿಬ್ಬಂದಿ
ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಡಿಯೋ ಹೇಳಿಕೆ ನೀಡಿದ್ದಾರೆ. ಈಗ ಅವರು ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದ್ದಾರೆ.
ನೇಗಿ ಅವರು ಮೊದಲು ನಿಂದಿಸಿದರು ಮತ್ತು ಸಚಿವರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ನಮಗೆ ತಿಳಿಸಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಿಎಸ್ ಕುನ್ವರ್ ಹೇಳಿದ್ದಾರೆ. ನಂತರ, ಎರಡು ಕಡೆಯವರ ನಡುವೆ ಜಗಳವಾಡಿದವು.ಇನ್ನೂ ಯಾವುದೇ ದೂರನ್ನು ಸ್ವೀಕರಿಸಿಲ್ಲ ಮತ್ತು ದೂರು ನೀಡಿದ ನಂತರ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸುತ್ತಾರೆ ಎಂದು ಹೇಳಿದ್ದಾರೆ.