ತಾಯಿ ಪ್ರೀತಿಗಾಗಿ ಮಿನಿ ತಾಜ್ ಮಹಲ್ ಕಟ್ಟಿದ ವ್ಯಕ್ತಿ;ಜನರ ಆಕರ್ಷಣೀಯ ಕೇಂದ್ರವಾದ ಮಿನಿ ತಾಜ್ ಮಹಲ್, ತಾಜ್ ಮಹಲ್ ನಂತೆಯೇ ಇರುವ ಈ ಸುಂದರ ಭವನದೊಳಗಡೆ ಮದರಸಾ ಕೂಡ ನಿರ್ಮಾಣ!
ತಮಿಳುನಾಡು;ಉದ್ಯಮಿಯೊಬ್ಬರು ತಮ್ಮ ತಾಯಿಯ ನೆನಪಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸಿ ಸುದ್ದಿಯಾಗಿದ್ದಾರೆ.
ತಮಿಳುನಾಡಿನ ತಿರುವಾರೂರಿನಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಮಿಯೋರ್ವರು ತನ್ನ ಪ್ರೀತಿಯ ತಾಯಿಗಾಗಿ ಮಿನಿ ತಾಜ್‌ಮಹಲ್ ನಿರ್ಮಿಸಿದ್ದಾರೆ.
ಅಮರುದ್ದೀನ್ ಶೇಕ್ ದಾವೂದ್ ಸಾಹಿಬ್ ಎಂಬವರು ಈ ತಾಜ್‌ಮಹಲ್ ಕಟ್ಟಿದ್ದಾರೆ. ಇವರು ಚೆನ್ನೈನಲ್ಲಿ ಹಾರ್ಡ್‌ವೇರ್ ಉದ್ಯಮಿಯಾಗಿದ್ದಾರೆ. ಇವರ ತಂದೆ ಅಬ್ದುಲ್ ಖಾದರ್ ಶೇಕ್ ದಾವೂದ್ ಚೆನ್ನೈನಲ್ಲಿ ಉದ್ಯಮಿಯಾಗಿದ್ದು, ಚರ್ಮದ ಸರಕುಗಳನ್ನು ವ್ಯವಹರಿಸುತ್ತಿದ್ದರು. ಆದರೆ, ಅಬ್ದುಲ್ ಖಾದರ್ ಶೇಕ್ ಅವರ ಮಕ್ಕಳು ಚಿಕ್ಕವರಿದ್ದಾಗ ನಿಧನರಾದರು. ಆ ನಂತರ ಜೈಲಾನಿ ಬೀವಿ ಮಕ್ಕಳನ್ನು ಕಷ್ಟಪಟ್ಟು ಸಾಕಿ ಬೆಳೆಸಿದರು.
ಜೈಲಾನಿ ಅವರು ದಾವೂದ್ ಅವರಿಗೆ ವ್ಯಾಪಾರಗಳಲ್ಲೂ ಸಹಕರಿಸಿದ್ದರು.ಹೆಣ್ಣು ಮಕ್ಕಳನ್ನು ಕೂಡ ವಿವಾಹ ಮಾಡಿಸಿಕೊಟ್ಟಿದ್ದಾರೆ.
2020ರಲ್ಲಿ ತಾಯಿ ಜೈಲಾನಿ ಬೀವಿ ನಿಧನರಾದರು. ಇದು ಅಮರುದ್ದೀನ್‌ಗೆ ದೊಡ್ಡ ಆಘಾತವಾಯಿತು. ಅವರ ಪಾಲಿಗೆ ತಾಯಿ ಎಲ್ಲವೂ ಆಗಿದ್ದರು. ಹೀಗಾಗಿ ಜೈಲಾನಿ ಬೀವಿ, ಪ್ರತಿ ವರ್ಷವೂ ತಾಯಿ ನಿಧನರಾದ ದಿನ 1,000 ಜನರಿಗೆ ಅನ್ನದಾನ ನೀಡುತ್ತಿದ್ದಾರೆ.
ಅಮರುದ್ದೀನ್, ನಂತರ ತನ್ನ ತಾಯಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸುವ ಆಲೋಚನೆಗೆ ಮಾಡಿದ್ದಾರೆ. ಅವರು ತಮ್ಮ ಪೂರ್ವಜರ ಹಳ್ಳಿಯಾದ ಅಮ್ಮಯ್ಯಪ್ಪನ್‌ನಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸಿದರು ಮತ್ತು ಬಿಲ್ಡರ್ ಸ್ನೇಹಿತನ ಬೆಂಬಲದೊಂದಿಗೆ ಸ್ಮಾರಕವನ್ನು ನಿರ್ಮಿಸಲು ಪ್ರಾರಂಭಿಸಿದರು.
ಮಿನಿ ತಾಜ್‌ಮಹಲ್‌ಗಾಗಿ ರಾಜಸ್ಥಾನದಿಂದ ಅಮೃತಶಿಲೆಯನ್ನು ಖರೀದಿಸಿದರು ಮತ್ತು ಆಗ್ರಾದ ತಾಜ್ ಮಹಲ್‌ನಲ್ಲಿರುವಂತೆಯೇ ಸ್ಮಾರಕದ ಸುತ್ತಲೂ ಮಾರ್ಗಗಳು ಮತ್ತು ಕಾಲುದಾರಿಗಳನ್ನು ಮಾಡಿದರು.
ಜೂನ್ 2ರಂದು ಸ್ಮಾರಕವನ್ನು ಸಾರ್ವಜನಿಕರಿಗಾಗಿ ತೆರೆಯಲಾಯಿತು.ಇದು ಎಲ್ಲಾ ಧರ್ಮದ ಜನರು ಧ್ಯಾನ ಮಾಡಬಹುದಾದ ಧ್ಯಾನ ಕೇಂದ್ರಗಳನ್ನು ಹೊಂದಿದೆ ಮತ್ತು ಪ್ರಸ್ತುತ ವಿದ್ಯಾರ್ಥಿಗಳಿಗೆ ಮದ್ರಸಾವನ್ನು ಕೂಡ ಹೊಂದಿದೆ.