ಮೆಟ್ರೋದೊಳಗೆ ಇಬ್ಬರು ಮಹಿಳೆಯರ ಹೊಡೆದಾಟ;ವಿಡಿಯೋ ವೈರಲ್…
ದೆಹಲಿ ಮೆಟ್ರೋದೊಳಗೆ ಇಬ್ಬರು ಮಹಿಳೆಯರು ಗಲಾಟೆ
ಮಾಡಿಕೊಂಡ ವಿಡಿಯೋ ವೈರಲ್ ಆಗಿದೆ.
ಮಹಿಳೆಯರು ಮೆಟ್ರೋದೊಳಗೆ ಹೊಡೆದಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
ಮಹಿಳೆಯೊಬ್ಬಳು ತನ್ನ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದುಕೊಂಡು ಇನ್ನೊಬ್ಬ ಮಹಿಳೆಯನ್ನು ಬೆದರಿಸಲು ಮತ್ತು ಹೊಡೆಯಲು ಪ್ರಯತ್ನಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇನ್ನೊಬ್ಬ ಮಹಿಳೆ ಕೈಯಲ್ಲಿ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೊಡೆದಾಟ ಶುರು ಮಾಡಿದ್ದಾರೆ. ವೈರಲ್ ವೀಡಿಯೊದಲ್ಲಿ ಕಂಡುಬಂದಂತೆ ಸುತ್ತಮುತ್ತಲಿನ ಜನರು ಅವರನ್ನು ತಡೆಯಲು ಪ್ರಯತ್ನಿಸಿದರು. ಬಳಿಕ ಇಬ್ಬರೂ ಮಾತಿನಲ್ಲೇ ಕಿರುಚುತ್ತಿರುವುದು ಕಂಡುಬಂದಿದೆ.
ಬುಧವಾರ ಆನ್ ಲೈನ್ ನಲ್ಲಿ ಹಂಚಿಕೊಂಡಾಗಿನಿಂದ, ಈ ತುಣುಕನ್ನು ನೆಟ್ಟಿಗರು 1,50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
@gharkekalesh pic.twitter.com/Ii64Gp8j0r
— Arhant Shelby (@Arhantt_pvt) March 29, 2023