ಶಿಶ್ನವನ್ನು ಕತ್ತರಿಸಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಎಂಬಿಬಿಎಸ್ ವಿದ್ಯಾರ್ಥಿ

ಶಿಶ್ನವನ್ನು ಕತ್ತರಿಸಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಎಂಬಿಬಿಎಸ್ ವಿದ್ಯಾರ್ಥಿ

ಹೈದರಾಬಾದ್‌;ಯುವಕನೊಬ್ಬ ಶಿಶ್ನವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಗದ್ಗಿರಿಗುಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಎಂಬಿಬಿಎಸ್ ವಿದ್ಯಾರ್ಥಿ ದೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡವರು.ಜಗದ್ಗಿರಿಗುಟ್ಟ ವ್ಯಾಪ್ತಿಯ ಪಾಪಿರೆಡ್ಡಿ ನಗರ ರಸ್ತೆ ಸಂಖ್ಯೆಯಲ್ಲಿನ ಮನೆಯಲ್ಲಿಯೇ ದೀಕ್ಷಿತ್ ಶಿಶ್ನವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೀಕ್ಷಿತ್ ರೆಡ್ಡಿ ಆತ್ಮಹತ್ಯೆಗೆ ಕಾರಣಗಳು ಇನ್ನಷ್ಟೇ ತಿಳಿದುಬರಬೇಕಿದೆ.

ದೀಕ್ಷಿತ್ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ದೀಕ್ಷಿತ್ ಶಿಶ್ನವನ್ನು ಕತ್ತರಿಸಿದ ರೀತಿ ಪತ್ತೆಯಾದ ಕಾರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದು ಕೊಲೆಯಾ ಅಥವಾ ಆತ್ಮಹತ್ಯೆಯ ಎಂಬ ಶಂಕೆ ಕೂಡ ಮೂಡಿದೆ ಎನ್ನಲಾಗಿದೆ.

ಟಾಪ್ ನ್ಯೂಸ್