ಹೆಣ್ಣು ಮೊಸಳೆಯನ್ನು ವಿವಾಹವಾದ ಮೇಯರ್; ವಿಚಿತ್ರ ಘಟನೆ ವರದಿ
ದಕ್ಷಿಣ ಮೆಕ್ಸಿಕೋದ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಅಲಿಸಿಯಾ ಆಡ್ರಿಯಾನಾ ಎಂಬ ಹೆಣ್ಣು ಮೊಸಳೆಯನ್ನು ವಿವಾಹವಾಗಿದ್ದು ಈ ಕುರಿತ ವಿಡಿಯೋ ವೈರಲ್ ಆಗಿದೆ.
ದಕ್ಷಿಣ ಮೆಕ್ಸಿಕೋದಲ್ಲಿರುವ ಸ್ಯಾನ್ ಪೆಡ್ರೊ ಹುವಾಮೆಲುಲಾ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ, ಅದೃಷ್ಟವನ್ನು ತರುತ್ತದೆ ಎಂದು ನಂಬಲಾದ ಸಾಂಪ್ರದಾಯಿಕ ಸಮಾರಂಭದಲ್ಲಿ ಹೆಣ್ಣು ಮೊಸಳೆಯನ್ನು ವಿವಾಹವಾಗಿದ್ದಾರೆ.
ಚೊಂಟಾಲ್ ಮತ್ತು ಹುವಾವೆ ಸ್ಥಳೀಯ ಗುಂಪುಗಳು ಶಾಂತಿಯನ್ನು ಸ್ಮರಿಸಲು 230 ವರ್ಷಗಳಿಂದ ಈ ವಿವಾಹ ಆಚರಣೆಯನ್ನು ರೂಢಿಸಿಕೊಂಡು ಬಂದಿದೆ.
ಈ ವಿವಾಹ ಸಮಾರಂಭವು ಮಳೆ, ಬೆಳೆ ಮೊಳಕೆಯೊಡೆಯಲು ಮತ್ತು ಸಾಮರಸ್ಯದಿಂದ ಜೀವನ ನಡೆಸಲು ಆಶೀರ್ವಾದವನ್ನು ಪಡೆಯಲು ಈ ಆಚರಣೆ ಮಾಡಲಾಗುತ್ತದೆ.
ಮದುವೆಯಲ್ಲಿ ಮೊಸಳೆಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಆ ಮೊಸಳೆಗೆ ಬಾಯಿಯನ್ನು ಕಟ್ಟಿ ಹಾಕಲಾಗಿತ್ತು. ಈ ಮೊಸಳೆ ಮದುವೆ ಮನುಷ್ಯರ ಮದುವೆಗಿಂತ ಅದ್ಧೂರಿಯಾಗಿ ನಡೆಯಿತು. ಮೇಯರ್ ವಧು ಆಗಿರುವ ಮೊಸಳೆಯನ್ನು ಕೈಯಲ್ಲಿ ಹಿಡಿದು ಜತೆ ನೃತ್ಯ ಮಾಡುತ್ತಾರೆ. ಮೇಯರ್ ಮೊಸಳೆ ಮೂತಿಗೆ ಮುತ್ತು ಚುಂಬಿಸುತ್ತಾರೆ ಸಮಾರಂಭವು ಮುಕ್ತಾಯವಾಗುತ್ತದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದೆಂತಾ ವಿಚಿತ್ರ ಆಚರಣೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.