ಮಸ್ಜಿದ್ ಅಲ್ ಹರಾಮ್‌ನಲ್ಲಿ ತರಾವೀಹ್ ನೇತೃತ್ವದಿಂದ ಹಿಂದೆ ಸರಿದ ಕಳೆದ 30 ವರ್ಷಗಳಿಂದ ನೇತೃತ್ವ ನೀಡಿದ್ದ ಇಮಾಮ್

ಸೌದಿಅರೇಬಿಯಾ;ಮಸ್ಜಿದ್ ಅಲ್ ಹರಾಮ್‌ನ ಇಮಾಮ್‌ಗಳಲ್ಲಿ ಒಬ್ಬರಾದ ಡಾ.ಸೌದ್ ಅಶ್ ಶುರೈಮ್ ಅವರು ಈ ಬಾರಿಯ ರಂಝಾನ್‌ನಲ್ಲಿ ಮಸ್ಜಿದ್ ಅಲ್ ಹರಾಮ್‌ನಲ್ಲಿ ತರಾವೀಹ್ ನಮಾಝ್ ಗೆ ನೇತೃತ್ವ ನೀಡುವುದಿಲ್ಲ ಎಂದು ವರದಿ ತಿಳಿಸಿದೆ.

ಡಾ.ಸೌದ್ 1991ರಿಂದ ಮಕ್ಕಾದ ತರಾವೀಹ್ ನಮಾಝ್ ಗೆ ನೇತೃತ್ವ ನೀಡುತ್ತಿದ್ದರು.ಡಿಸೆಂಬರ್ 2022ರಲ್ಲಿ ಅವರು ಮಸ್ಜಿದ್ ಅಲ್ ಹರಾಮ್‌ನ ಇಮಾಮ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮಸ್ಜಿದ್ ಅಲ್ ಹರಾಮ್‌ನ ಇಮಾಮ್ ಸ್ಥಾನದಿಂದ ನಿವೃತ್ತರಾಗಿರುವ ಸೌದ್ ಅಶ್ ಶುರೈಮ್ ಅವರು ಈ ಬಾರಿಯ ರಂಝಾನ್‌ನಲ್ಲಿ ತರಾವೀಹ್ ನಮಾಝ್ ಗೆ ಇಮಾಮ್ ನಿಲ್ಲುವುದರಿಂದ ಹಿಂದೆ ಸರಿದಿದ್ದಾರೆ.

ಈ ಬಾರಿಯ ರಂಝಾನ್‌ ದಿನಗಳಲ್ಲಿ ತರಾವೀಹ್‌ ಮತ್ತು ತಹಜ್ಜುದ್‌ ನಮಾಝ್‌ ಗೆ ಶೈಖ್‌ ಅಬ್ದುರ್ರಹ್ಮಾನ್‌ ಸುದೈಸ್‌, ಶೈಖ್‌ ಬಂದರ್‌ ಬಲೀಲಾ, ಶೈಖ್‌ ಮಾಹಿರ್‌ ಅಲ್‌ ಮುಐಖಲಿ, ಶೈಖ್‌ ಅಬ್ದುಲ್ಲಾ ಜುಹಾನಿ ಹಾಗೂ ಶೈಖ್‌ ಯಾಸಿರ್‌ ದೊಸಾರಿ ನೇತೃತ್ವ ನೀಡಲಿದ್ದಾರೆ.

ಟಾಪ್ ನ್ಯೂಸ್