ಅಲ್- ಅಕ್ಸಾ ಮಸೀದಿಯಲ್ಲಿ ರಂಝಾನ್ ಪಾರ್ಥನೆ ಮಾಡುತ್ತಿದ್ದವರ ಮೇಲೆ ಇಸ್ರೇಲ್ ದಾಳಿ, ಜೆರುಸಲೆಮ್ ನಲ್ಲಿ ಉದ್ವಿಗ್ನತೆ ನಿರ್ಮಾಣ

ಇಸ್ರೇಲಿ ಪೊಲೀಸರು ಅಲ್-ಅಕ್ಸಾ ಮಸೀದಿ ಆವರಣದಲ್ಲಿ ಬುಧವಾರ ರಾತ್ರಿಯಿಡೀ ರಂಝಾನ್ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದು ಜೆರುಸಲೆಮ್‌ನಲ್ಲಿ ಉದ್ವಿಗ್ನತೆ ಉಂಟಾಗಿದೆ.

ಜೆರುಸಲೆಮ್‌ನ ಅಲ್-ಅಕ್ಸಾ ಮಸೀದಿಯ ಮೇಲೆ ಇಸ್ರೇಲಿ ಪೋಲೀಸ್ ದಾಳಿಯ ಕುರಿತು ಚರ್ಚಿಸಲು ಅರಬ್ ಲೀಗ್ ತುರ್ತು ಸಭೆಯನ್ನು ನಡೆಸಲು ಸಜ್ಜಾಗಿದೆ.

ಘಟನೆಯಲ್ಲಿ ಕನಿಷ್ಠ 12 ಪ್ಯಾಲೆಸ್ತೀನಿಯಾದವರಿಗೆ ಗಾಯವಾಗಿದೆ.ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು “ಯಥಾಸ್ಥಿತಿ ಕಾಯ್ದುಕೊಳ್ಳಲು” ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಜೋರ್ಡಾನ್, ಈಜಿಪ್ಟ್ ಮತ್ತು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಅರಬ್ ಲೀಗ್ ಸಭೆಯನ್ನು ಕರೆದಿದ್ದಾರೆ, ಪವಿತ್ರ ರಂಜಾನ್ ತಿಂಗಳಿನಲ್ಲಿ ಇಸ್ರೇಲಿ ಪೊಲೀಸರು ಅಲ್-ಅಕ್ಸಾ ಮಸೀದಿ ಆವರಣದಲ್ಲಿ ಬುಧವಾರ ರಾತ್ರಿಯಿಡೀ ಆರಾಧಕರ ಮೇಲೆ ದಾಳಿ ಮಾಡಿದ ನಂತರ ಜೆರುಸಲೆಮ್‌ನಲ್ಲಿ ಉದ್ವಿಗ್ನತೆ ಹೆಚ್ಚಿದೆ.

ಅರಬ್ ಲೀಗ್ ಈ ಹಿಂದೆ ದಾಳಿಯನ್ನು ಖಂಡಿಸಿತ್ತು. ಇಸ್ರೇಲಿ ಸರ್ಕಾರ ಉಗ್ರಗಾಮಿ ವಿಧಾನಗಳನ್ನು ಕೊನೆಗೊಳಿಸದಿದ್ದರೆ ಪ್ಯಾಲೆಸ್ಟೀನಿಯನ್ನರೊಂದಿಗೆ ವ್ಯಾಪಕ ಘರ್ಷಣೆಗೆ ಕಾರಣವಾಗುತ್ತವೆ‌ ಎಂದು ಅರಬ್ ಲೀಗ್ ಹೇಳಿದೆ.

ಪ್ಯಾಲೇಸ್ತೀನಿಯನ್ ಅಧಿಕಾರಿಗಳ ಪ್ರಕಾರ, ಕನಿಷ್ಠ 400 ಪ್ಯಾಲೆಸ್ತೀನ್ ನಿಯಾದವರನ್ನು ಬುಧವಾರ ಬಂಧಿಸಲಾಗಿದೆ ಮತ್ತು ಇಸ್ರೇಲಿ ಕಸ್ಟಡಿಯಲ್ಲಿ ಉಳಿಸಲಾಗಿದೆ.ಆಕ್ರಮಿತ ಪೂರ್ವ ಜೆರುಸಲೆಮ್‌ನ ಅಟಾರೋಟ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com