ಮದುವೆ ಫಿಕ್ಸ್ ಆಗಿದ್ದ ಯುವತಿಯನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಅಗ್ನಿಕುಂಡ ಮಾಡಿ ಆಕೆಯನ್ನು ಎತ್ತಿಕೊಂಡು 7 ಹೆಜ್ಜೆ ಹಾಕಿ ನಮ್ಮ‌ ಮದುವೆಯಾಯ್ತು, ಇನ್ಯಾರನ್ನು ಆಗಬೇಡ ಎಂದ ಯುವಕ; ಕೇಸ್ ದಾಖಲು

ಮದುವೆ ಫಿಕ್ಸ್ ಆಗಿದ್ದ ಯುವತಿಯನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಅಗ್ನಿಕುಂಡ ಮಾಡಿ ಆಕೆಯನ್ನು ಎತ್ತಿಕೊಂಡು 7 ಹೆಜ್ಜೆ ಹಾಕಿ ನಮ್ಮ‌ ಮದುವೆಯಾಯ್ತು, ಇನ್ಯಾರನ್ನು ಆಗಬೇಡ ಎಂದ ಯುವಕ; ಕೇಸ್ ದಾಖಲು

ರಾಜಸ್ಥಾನ;ಮದುವೆ ಫಿಕ್ಸ್ ಆಗಿದ್ದ ಯುವತಿಯನ್ನು ಹೊತ್ತುಕೊಂಡು ಬಂದು‌ ನಿರ್ಜನ ಪ್ರದೇಶದಲ್ಲಿ ಅಗ್ನಿಕುಂಡ ಹಾಕಿ ಅವಳನ್ನು ಎತ್ತಿಕೊಂಡು ಬೆಂಕಿಯ ಸುತ್ತಲೂ ಏಳು ಹೆಜ್ಜೆ ಹಾಕಿ‌ ನಮ್ಮ ಮದುವೆಯಾಯ್ತು ಇನ್ಯಾರನ್ನೂ ವಿವಾಹವಾಗಬೇಡ ಎಂದು ಪ್ರಿಯಕರನೋರ್ವ ಬೆದರಿಸಿದ ಘಟನೆ ರಾಜಸ್ಥಾನದಿಂದ ವರದಿಯಾಗಿದೆ.

ಈ ಬಗ್ಗೆ ಕುಟುಂಬದ ಸದಸ್ಯರೊಂದಿಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.ಹಿಂದೂ ಸಂಪ್ರದಾಯದಲ್ಲಿ, ವಧುಗಳು ಮದುವೆಯಲ್ಲಿ ಅಗ್ನಿಕುಂಡದ ಸುತ್ತ ಏಳು ಹೆಜ್ಜೆಗಳನ್ನು ಇಡುತ್ತಾರೆ. ಇದನ್ನು ಸಪ್ತಪದಿ ಎನ್ನುತ್ತಾರೆ. ಹಾಗಾಗಿ ಉಪೇಂದ್ರ ಅಗ್ನಿಕುಂಡದ ಸುತ್ತ ಎತ್ತಿಕೊಂಡು ಏಳು ಹೆಜ್ಜೆ ಸುತ್ತಿ ನಾವು ಮದುವೆಯಾದೆವು. ಹಾಗಾಗಿ ನೀನು ಯಾರನ್ನೂ ಮದುವೆಯಾಗಬೇಡ ಎಂದು ತಾಕೀತು ಮಾಡಿ ಹೊರಟು ಹೋಗಿದ್ದಾನೆ.

ಈ ವೇಳೆ ತಪ್ಪಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಪೊಲೀಸರಿಗೆ ದೂರು ನೀಡಿದ್ದು, ಸಂತ್ರಸ್ತೆಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಪ್ರತಿಕ್ರಿಯಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೂಚಿಸಿದ್ದಾರೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ