ಬೋಳು ತಲೆಯ ಕಾರಣ ನೀಡಿ ವ್ಯಕ್ತಿಯೋರ್ವರನ್ನು ಕೆಲಸದಿಂದ ತೆಗೆದು ಹಾಕಿದ ವಿಚಿತ್ರ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ.
ಕಂಪೆನಿಯ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಇದೀಗ 71 ಲಕ್ಷ ರೂಪಾಯಿ ಪರಿಹಾರವನ್ನು ಪಡೆದುಕೊಂಡಿದ್ದಾರೆ.
60ರ ಹರೆಯದ ಮಾರ್ಕ್ ಜೋನ್ಸ್ ಎಂಬುವವರನ್ನು ಸ್ವತಃ ಬೋಳುತಲೆಯ ಮಧ್ಯ ವಯಸ್ಕ ಫಿಲಿಫ್ ಹೆಸ್ಕತ್ ಎಂಬವರು
ಕೆಲಸದಿಂದ ವಜಾ ಮಾಡಿದ್ದರು.ತನ್ನ ತಂಡದಲ್ಲಿ ಬೋಳು ತಲೆಯ ವ್ಯಕ್ತಿ ಇರಕೂಡದು ಎಂದು ಕೆಲಸದಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿದ್ದರು ಎನ್ನಲಾಗಿದೆ.
ಈ ಕುರಿತ ದೂರಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಬೋಳು ತಲೆ ಕೆಲಸದಿಂದ ವಜಾಗೊಳಿಸಲು ನೀಡುವ ಕಾರಣವಲ್ಲ.ಜೋನ್ಸ್ರನ್ನು ಕೆಲಸದಿಂದ ತೆಗೆದಿರುವುದಕ್ಕೆ 71 ಲಕ್ಷ ರೂ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.