ಉಡುಪಿ;ಗಾಂಜಾ ಸೇವನೆ ಆರೋಪದಲ್ಲಿ ಐವರು ಯುವಕರು ಅರೆಸ್ಟ್

ಉಡುಪಿ;ಗಾಂಜಾ ಸೇವನೆ ಆರೋಪದಲ್ಲಿ ಐವರು ಯುವಕರು ಅರೆಸ್ಟ್

ಉಡುಪಿ;ಗಾಂಜಾ ಸೇವನೆ ಆರೋಪದಲ್ಲಿ ಐವರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉಡುಪಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೈದ್ರಾಬಾದ್ ಮೂಲದ ರಿಶಿತ್ ಶಿವಕುಮಾರ್(21),ಮಣಿಪಾಲ ಕಾಯಿನ್ ಸರ್ಕಲ್ ಬಳಿ ಮಡಿಕೇರಿಯ ಪೊನ್ನಪ್ಪ(21), ಲಮಣಿಪಾಲ ಪೆರಂಪಳ್ಳಿ ರಸ್ತೆಯಲ್ಲಿ ಬಿಹಾರದ ಅನುರಾಗ್ ಕುಮಾರ್(20),ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಣಿಯೂರು ಎಂಬಲ್ಲಿ ಮೂಳೂರಿನ ತುಫೇಲ್(19), ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ಅಫ್ರಜ್(19) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ‌

ಇವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿ ಮೆಡಿಕಲ್‌ ಟೆಸ್ಟ್ ಮಾಡಿದಾಗ ಗಾಂಜಾ ಸೇವನೆ ದೃಢಪಟ್ಟಿದೆ ಎನ್ನಲಾಗಿದೆ.

ಟಾಪ್ ನ್ಯೂಸ್