ಕುಂದಾಪುರ;ತ್ರಾಸಿ ಮರವಂತೆ ಬೀಚ್ ನಲ್ಲಿ ಯುವಕನೋರ್ವ ಸಮುದ್ರಪಾಲಾದ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್ ಸಮುದ್ರಪಾಲಾದ ಯುವಕ.
ಗದಗ ಮೂಲದ ಮೂವರು ಯುವಕರು ಬೀಚ್‌ನಲ್ಲಿ ಈಜಲು ಹೋದಾಗ ಘಟನೆ ಸಂಭವಿಸಿದೆ.
ಮೂವರು ಯುವಕರು ನೀರಿಗೆ ಈಜಲು ಇಳಿದಿದ್ದು,ಈ ವೇಳೆ ಅಲೆಯ ರಭಸಕ್ಕೆ ಓರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ.
ಬಳಿಕ ಸ್ಥಳೀಯರ ತಂಡ ಹಾಗೂ ಅಗ್ನಿಶಾಮಕ ದಳ ಮತ್ತು ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು ಹಾಗೂ ಗಂಗೊಳ್ಳಿ ಪೊಲೀಸರು ಹುಡುಕಾಟ ಕಾರ್ಯಚರಣೆ ನಡೆಸಿದ್ದಾರೆ.
ಸಮುದ್ರದ ಅಬ್ಬರದ ಅಲೆ ಇರುವುದರಿಂದ ಕಾರ್ಯಚರಣೆಗೆ ವಿಳಂಬವಾಗಿದೆ ಎನ್ನಲಾಗಿದೆ.