ಮಾನ್ವಿ:ಲಾರಿ ಹಾಗೂ ದ್ವಿಚಕ್ರ ವಾಹನ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೈಕ್
ಸವಾರ ಮೃತಪಟ್ಟ ಘಟನೆ ಬಾಷುಮಿಯಾ ಸರಕಾರಿ ಕಾಲೇಜು ಹತ್ತಿರ ನಡೆದಿದೆ.
ಮುಷ್ಟೂರು ಗ್ರಾಮದ ಜಲಾಲಿ(35)ಮೃತ ಯುವಕ.
ಸ್ಥಳಕ್ಕೆ ಪಿ.ಐ.ಮಹದೇವಪ್ಪ ಪಂಚಮುಖಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.